ಅಪ್ರೆಂಟೀಸ್ ನೇಮಕಾತಿಯೆಂಬ ಅನಿಷ್ಟ ಪದ್ಧತಿ
ಮಂಗಳೂರು: ಅಖಿಲ ಭಾರತ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂಪ್ಲಾಯೀಸ್ ಅಸೋಸಿಯೇಷನ್ ಹಾಗೂ ಅಖಿಲ ಭಾರತ ಯೂನಿಯನ್ ಬ್ಯಾಂಕ್ ಆಫೀಸರ್ಸ್ ಫೆಡರೇಶನ್ ವತಿಯಿಂದ, ಸಿಬ್ಬಂದಿ ನೇಮಕಾತಿಯಲ್ಲಿ ವಿಳಂಬವಾಗುವ ಬಗ್ಗೆ ಹಾಗೂ ಇತರ ಗ್ರಾಹಕ ಸ್ನೇಹಿ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ವಿವಿಧ ಸಂದರ್ಭಗಳಲ್ಲಿ ಮ್ಯಾನೇಜ್‌ಮೆಂಟ್‌ಗೆ ಮಾಹಿತಿ ನೀಡಿದ್ದರೂ, ಕಳೆದ ಎರಡು ವರ್ಷಗಳಿಂದ ವಿವಿಧ ಸಮಸ್ಯೆಗಳಿಗೆ ಸೌಹಾರ್ದಯುತ ಪರಿಹಾರ ನೀಡುವಲ್ಲಿ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ.
ಪ್ರಮುಖವಾಗಿ ಎರಡೂ ಟ್ರೇಡ್ ಯೂನಿಯನ್‌ನ ಬೇಡಿಕೆಯಂತೆ ಸಿಬ್ಬಂದಿ ಕೊರತೆ ಮತ್ತು ಅಪ್ರೆಂಟಿಸ್ ನೇಮಕಾತಿಯೆಂಬ, ಅನಿಷ್ಟ ಪದ್ಧತಿಯು ಯುವ ಸಮುದಾಯನ್ನು ವಂಚಿಸುತ್ತಿರುವ ಪ್ರಕ್ರಿಯೆಯನ್ನು ತಕ್ಷಣ ಕೈ ಬಿಡುವಂತೆ ಹಾಗೂ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಅನೇಕ ಭಾರಿ ಪ್ರಯತ್ನಿಸಿದರೂ, ಯಾವುದೇ ಅರ್ಥಪೂರ್ಣ ಚರ್ಚೆಗೆ ಆಸ್ಪದ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ AIUBOF ಮತ್ತು AIUBEA ಯು ಬ್ಯಾಂಕ್ ನ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಿ ಬ್ಯಾಂಕಿನ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ, ನಮ್ಮೊಂದಿಗೆ ಸಹಕರಿಸುವಂತೆ ಒತ್ತಾಯಿಸಲಾಯಿತು.