For the best experience, open
https://m.samyuktakarnataka.in
on your mobile browser.

ಆಂಧ್ರ ಸರಕಾರದಿಂದ ಎಲ್ಲ ಸಹಕಾರ

02:54 PM Aug 13, 2024 IST | Samyukta Karnataka
ಆಂಧ್ರ ಸರಕಾರದಿಂದ ಎಲ್ಲ ಸಹಕಾರ

ಬಳ್ಳಾರಿ: ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್ ಅಳವಡಿಕೆ ಸಂಬಂದ ಆಂಧ್ರಪ್ರದೇಶದಿಂದ ಎಲ್ಲ ಸಹಕಾರ ನೀಡಲಾಗುತ್ತಿದೆ ಎಂದು ಆಂಧ್ರ ಜಲಸಂಪನ್ಮೂಲ ಸಚಿವ ನಿಮ್ಮಲ ರಾಮನಾಯುಡು ಹೇಳಿದರು.
ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್ ಕಿತ್ತುಹೋದ ಪರಿಸ್ಥಿತಿ ‌ಪರಿಶೀಲನೆ ಮಾಡಿ ಮಾತನಾಡಿದರು. ಘಟನೆ ನಡೆದ ದಿನದಿಂದಲೂ ನಾವು ಕರ್ನಾಟಕ ಸರಕಾರದ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಟಿಬಿ ಬೋಡ್೯ ನಲ್ಲಿ ಸಭೆ ಕೂಡ ನಡೆಸಿದ್ದೇವೆ. ಬೋಡ್೯ ನಲ್ಲಿ ೧೩೦ ಕೋಟಿ ರು. ಅನುದಾನವಿದೆ. ಈಗ ಗೇಟ್ ಅಳವಡಿಕೆ ಕಾರ್ಯಕ್ಕೆ ೫ ಕೋಟಿ ರು.ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಬೋಡ್೯ ಮಂಡಳಿ ಅನುದಾನ ಬಳಕೆಗೆ ಅನುಮೋದನೆ ನೀಡಿದ್ದು, ಜಲಾಶಯದ ನೀರು ಪೋಲಾಗದಂತೆ ಯಾವ ರೀತಿ ಗೇಟ ಅಳವಡಿಸಬೇಕು ಎನ್ನುವ ಚರ್ಚೆ ನಡೆದಿದೆ. ಆಂಧ್ರ, ತೆಲಂಗಾಣ, ಕರ್ನಾಟಕ ಮೂರು ರಾಜ್ಯಗಳಿಂದ ಒಗ್ಗೂಡಿ ಕೆಲಸ ಮಾಡಲಾಗುತ್ತದೆ. ನಮ್ಮ ಸಿಎಂ ಕೂಡ ಈ ಬಗ್ಗೆ ನಿರಂತರ ಸಭೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು‌ ಕೂಡ ಗೇಟ್ ಪರಿಶೀಲನೆ ಮಾಡಲಿದ್ದಾರೆ ಎಂದರು.
ಆಂಧ್ರ ಸರಕಾರದ ಆರ್ಥಿಕ‌ ಮಂತ್ರಿ ಪಯ್ಯಾವುಲ ಕೇಶವ ಮಾತನಾಡಿ, ತುಂಗಭದ್ರಾ ಜಲಾಶಯ ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರವಲ್ಲ ಆಂಧ್ರ, ತೆಲಂಗಾಣಕ್ಕೂ ಜೀವನಾಧಾರವಾಗಿದೆ. ಜಲಾಶಯ ಸುರಕ್ಷತೆ ಬಗ್ಗೆ ಗಮನ ಹರಿಸುತ್ತಿದ್ದೇವೆ ಮುಂದಿನ‌ ದಿನಗಳಲ್ಲಿ ಈ ರೀತಿ ಘಟನೆ ಮರುಕಳಿಸದಂತೆ ಮೂರು ರಾಜ್ಯದಿಂದ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಅನಂತಪುರ ಜಿಲ್ಲಾಧಿಕಾರಿ ಡಾ.ವಿನೋದ್ ಕುಮಾರ, ಕರ್ನೂಲ ಎಂಪಿ ನಾಗರಾಜು, ಕಲ್ಯಾಣ ದುರ್ಗ ಶಾಸಕ ಅಮಿಲಿನೇನಿ ಸುರೇಂದರಬಾಬು, ಗುಂತಕಲ್ ಶಾಸಕ ಕುಮ್ಮನೂರು ಜಯರಾಂ ಇದ್ದರು.