ಆಕಸ್ಮಿಕ ಬೆಂಕಿ: ಶ್ರೀರಾಮ ಫೈನಾನ್ಸ್ ಕಚೇರಿ ಬಹುತೇಕ ಭಸ್ಮ
ಚಿಕ್ಕಮಗಳೂರು: ಮೂಡಿಗೆರೆ ಪಟ್ಟಣದ ಮೇಗಲಪೇಟೆ ಕೆನರಾ ಬ್ಯಾಂಕ್ ಇರುವ ಪಾರ್ವತಿ ಹೈಟ್ಸ್ ಕಟ್ಟಡಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದು, ಕಟ್ಟದ ಕೆನರಾ ಬ್ಯಾಂಕ್ ಮೇಲಂತಸ್ತಿನಲ್ಲಿದ್ದ ಶ್ರೀರಾಮ ಫೈನಾನ್ಸ್ ಕಚೇರಿ ಬಹುತೇಕ ಸುಟ್ಟು ಹೋಗಿದೆ.
ಮಂಗಳವಾರ ರಾತ್ರಿ ಘಟನೆ ಸಂಭವಿಸಿದ್ದು, 11ಗಂಟೆ ವೇಳೆ ಕಟ್ಡಡದಿಂದ ಶಬ್ಧ ಹಾಗೂ ಹೊಗೆ ಬರುತ್ತಿದ್ದನ್ನು ಕಂಡ ಅಕ್ಕಪಕ್ಕದ ನಿವಾಸಿಗಳು ತಕ್ಷಣ ಕಟ್ಟಡ ಮಾಲೀಕರಿಗೆ ಮತ್ತು ಅಗ್ನಿಶಾಮಕ ಕಚೇರಿಗೆ ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಶ್ರೀರಾಮ ಫೈನಾನ್ಸ್ ಕಚೇರಿ ಬಹುತೇಕ ಸುಟ್ಟು ಹೋಗಿದ್ದು, ಫೈನಾನ್ಸ್ ನಲ್ಲಿದ್ದ ಕಡತಗಳು ಹಾಗೂ ಪರಿಕರಗಳು ಸುಟ್ಟು ಹೋಗಿವೆ. ಲಾಕರ್ ನಲ್ಲಿದ್ದ ಹಣ ಮತ್ತು ಚಿನ್ನವನ್ನು ಸುರಕ್ಷಿತವಾಗಿ ಹೊರ ತರಲಾಗಿದೆ.
ಇದೇ ಕಟ್ಟಡದಲ್ಲಿ ಕೆನರಾ ಬ್ಯಾಂಕ್ ಕಚೇರಿಯೂ ಇದ್ದು ಬೆಂಕಿ ಆವರಿಸಿ ಬ್ಯಾಂಕ್ ಕಚೇರಿಗೆ ತಗುಲಿದ್ದರೇ ಬಾರೀ ಅನಾಹುತ ಸಂಭವಿಸುತ್ತಿತ್ತು.
ಅಗ್ನಿಶಾಮಕ ದಳದ ಸಿಬ್ಬಂದಿ ಶ್ರಮ ಹಾಗೂ ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಾರೀ ಅನಾಹುತ ತಪ್ಪಿದೆ.
ಕಟ್ಟಡವೂ ಶಿವಪ್ರಕಾಶ್ ಎಂಬುವರಿಗೆ ಸೇರಿದ್ದಾಗಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಯುಪಿಎಸ್ ಹೀಟ್ ಆಗಿ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ.