For the best experience, open
https://m.samyuktakarnataka.in
on your mobile browser.

ಈಜಲು ತೆರಳಿದ್ದ ಯುವಕರು ನಾಪತ್ತೆ

08:47 PM Sep 29, 2024 IST | Samyukta Karnataka
ಈಜಲು ತೆರಳಿದ್ದ ಯುವಕರು ನಾಪತ್ತೆ

ಮಂಗಳೂರು: ಹೊರವಲಯದ ಮರವೂರು ಸೇತುವೆ ಕೆಳಗಿನ ನದಿಯಲ್ಲಿ ಈಜಲು ಇಳಿದಿದ್ದ ನಾಲ್ವರ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟ‌ನೆ ಇಂದು ಸಂಜೆ ನಡೆದಿದೆ.
ನೀರಿನಲ್ಲಿ ಮುಳುಗಿ ನಾಪತ್ತೆಯಾದವರನ್ನು ಕೊಟ್ಟಾರ ಚೌಕಿ ನಿವಾಸಿ ಸುಮಿತ್(20), ಉರ್ವ ಅಂಗಡಿ ನಿವಾಸಿ ಅನೀಶ್(19) ಎಂದು ತಿಳಿದು ಬಂದಿದ್ದು, ಕೋಡಿಕಲ್ ನಿವಾಸಿ ಅರುಣ್(19), ಕೋಡಿಕಲ್ ಮಾಳೂರು ನಿವಾಸಿ ದೀಕ್ಷಿತ್(18) ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜೆ 4 ಗಂಟೆಯ ಸುಮಾರಿಗೆ ನಾಲ್ವರು ಸ್ನೇಹಿತರು ಮರವೂರು ಸೇತುವೆಯ ಅಡಿಯಲ್ಲಿ ನದಿಯಲ್ಲಿ ಈಜಲು ಇಳಿದಿದ್ದರು. ಈ ವೇಳೆ ಕೊಟ್ಟಾರ ಚೌಕಿ ನಿವಾಸಿ ಸುಮಿತ್ ಮತ್ತು ಉರ್ವ ಅಂಗಡಿ ನಿವಾಸಿ ಅನೀಶ್ ನೀರಿನ ಆಳ ತಿಳಿಯದೆ ನದಿಯಲ್ಲಿ ಇಳಿದ ಪರಿಣಾಮ ಇಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳ ಸಿಬ್ಬಂದಿ‌, ಈಜು ತಜ್ಞರ ತಂಡ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು, ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.