For the best experience, open
https://m.samyuktakarnataka.in
on your mobile browser.

ಐಶ್ವರ್ಯ ಸಾಧನೆಗೆ ಶುಭ ಹಾರೈಸಿದ ಸಚಿವ ಎಂ.ಬಿ. ಪಾಟೀಲ್‌

10:18 AM Dec 07, 2024 IST | Samyukta Karnataka
ಐಶ್ವರ್ಯ ಸಾಧನೆಗೆ ಶುಭ ಹಾರೈಸಿದ ಸಚಿವ ಎಂ ಬಿ  ಪಾಟೀಲ್‌

ಬೆಂಗಳೂರು: ಮಹಾರಾಷ್ಟ್ರದ ಅಮರಾವತಿಯಲ್ಲಿ ಡಿಸೆಂಬರ್ 10ರಿಂದ 12ರವರೆಗೆ ನಡೆಯಲಿರುವ ಬಾಲಕ/ಬಾಲಕಿಯರ ರಾಷ್ಟ್ರಮಟ್ಟದ #ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿರುವ ಕರ್ನಾಟಕದ ಎಲ್ಲಾ ಕ್ರೀಡಾಪಟುಗಳಿಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಅವರು ಹಾರ್ದಿಕ ಅಭಿನಂದನೆಗಳು ತಿಳಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಳತಾಣದಲ್ಲಿ ಪೋಸ್ಟ್‌ ಮಾಡಿದ್ದು 14 ವರ್ಷದೊಳಗಿನ ಬಾಲಕಿಯರ ವಿಭಾಗಕ್ಕೆ ಬಬಲೇಶ್ವರ ತಾಲ್ಲೂಕಿನ ತಿಗಣಿಬಿದರಿ ಸರಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಐಶ್ವರ್ಯ ಅಶೋಕ್ ಬಿರಾದಾರ್, ರಾಜ್ಯ ತಂಡಕ್ಕೆ ಆಯ್ಕೆಯಾಗುವ ಮೂಲಕ ವಿಜಯಪುರದ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. ಈ ಸಾಧನೆಗೆ ಐಶ್ವರ್ಯಗೆ ಶುಭಾಶಯಗಳು. ತಂಡವು ಅತ್ಯುತ್ತಮ ಪ್ರದರ್ಶನನೀಡಿ ಚಾಂಪಿಯನ್ ಆಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

Tags :