For the best experience, open
https://m.samyuktakarnataka.in
on your mobile browser.

ಕಂಚಿನಡ್ಕ ಟೋಲ್ ತಾತ್ಕಾಲಿಕ ತಡೆ ಆದೇಶ : ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

09:07 PM Aug 23, 2024 IST | Samyukta Karnataka
ಕಂಚಿನಡ್ಕ ಟೋಲ್ ತಾತ್ಕಾಲಿಕ ತಡೆ ಆದೇಶ   ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಪಡುಬಿದ್ರಿ : ಪಡುಬಿದ್ರಿಯ ಕಂಚಿನಡ್ಕದಲ್ಲಿ ಪ್ರಸ್ತಾವಿತ ಟೋಲ್ ಗೇಟ್ ಗೆ ಸರಕಾರದಿಂದ ತಾತ್ಕಾಲಿಕ ತಡೆ ನೀಡಿದ ಹಿನ್ನೆಲೆಯಲ್ಲಿ ಪಡುಬಿದ್ರಿ ಪೇಟೆಯಲ್ಲಿ ಶುಕ್ರವಾರ ಸಂಜೆ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಪೂಜಾರಿ ಪಡುಬಿದ್ರಿಯವರ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು.
ಕಳೆದ ಬುಧವಾರ ಟೋಲ್ ರದ್ದತಿ ಆಗ್ರಹಿಸಿ ಮಾಜಿ ಸಚಿವ ವಿನಯಕುಮಾರ್‌ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಆಯೋಜನೆಯಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತು. ಗುರುವಾರ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ನಿಯೋಗ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿ, ಟೋಲ್ ರದ್ದತಿಗೆ ಮನವಿ ಸಲ್ಲಿಸಿ ಇಲ್ಲಿಯ ವಸ್ತು ಸ್ಥಿತಿಯನ್ನು ಸಚಿವರಿಗೆ ಮನವರಿಕೆ ಮಾಡಿದ್ದರು.
ಶುಕ್ರವಾರ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿಯವರು ಕಂಚಿನಡ್ಕದಲ್ಲಿ ನಿರ್ಮಾಣಗೊಳ್ಳಲಿದ್ದ ಟೋಲ್ ಗೇಟ್ ಕಾಮಗಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿದ ಬಗ್ಗೆ ಆದೇಶ ಹೊರಡಿಸಿದ್ದಾರೆ. ಇದರಿಂದ ಕಾಂಗ್ರೆಸ್ ನಿಯೋಗ ಮೊದಲ ಹಂತದಲ್ಲಿ ಯಶ ಸಾಧಿಸಿದೆ.
ಈ ಸಂದರ್ಭ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಗೀತಾ ವಾಗ್ಳೆ, ಕಾಪು ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಕಾಂಗ್ರೆಸ್‌ ಮುಖಂಡರುಗಳಾದ ನವೀನ್ ಚಂದ್ರ ಜೆ ಶೆಟ್ಟಿ, ಸುನಿಲ್ ಬಂಗೇರ, ನವೀನ್ ಎನ್ ಶೆಟ್ಟಿ, ಶೇಖರ್ ಹೆಜಮಾಡಿ, ರಮೀಝ್ ಹುಸೇನ್, ಶರ್ಫುದ್ದೀನ್ ಶೇಖ್, ವೈ ಸುಕುಮಾರ್, ಕರುಣಾಕರ ಪೂಜಾರಿ, ದೀಪಕ್ ಎರ್ಮಾಳು, ದಿವಾಕರ ಶೆಟ್ಟಿ, ಅಶೋಕ್‌ ಪಡುಬಿದ್ರಿ, ವಿಶ್ವಾಸ್ ಅಮೀನ್, ಜ್ಯೋತಿ ಮೆನನ್, ಅಶೋಕ್ ನಾಯರಿ, ವೈ ಸುಧೀರ್ ಕುಮಾರ್, ಶಫಿ ಪಡುಬಿದ್ರಿ ಮತ್ತಿತರರು ಉಪಸ್ಥಿತರಿದ್ದರು.

Tags :