ಕರ್ತವ್ಯನಿರತ ಚುನಾವಣೆ ಸಿಬ್ಬಂದಿ ಸಾವು
01:57 PM Apr 26, 2024 IST | Samyukta Karnataka
ಚಿತ್ರದುರ್ಗ: ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚುನಾವಣಾ ಸಿಬ್ಬಂದಿ ಮೃತಪಟ್ಟ ಘಟನೆ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿಯಲ್ಲಿ ನಡೆದಿದೆ.
ಚಳ್ಳಕೆರೆ ಪಟ್ಟಣದ ವಿಠಲ ನಗರದ ನಿವಾಸಿ ಯಶೋಧಮ್ಮ(55) ಮೃತಪಟ್ಟವರೆಂದು ಗುರುತಿಸಲಾಗಿದೆ. ಎಲ್ಲ ಚುನಾವಣಾ ಸಿಬ್ಬಂದಿಯಂತೆ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯಶೋಧಮ್ಮ ಲೋ ಬಿಪಿಯಿಂದಾಗಿ ತಲೆ ಸುತ್ತು ಬಂದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರೊಳಗೆ ಅವರ ಮೃತಪಟ್ಟಿದ್ದಾರೆ.