ಕಲಬುರಗಿ ಲೋಕಾ ದಾಳಿಯಲ್ಲಿ ಕ್ಯಾಸಿನೊ ಕಾಯಿನ್ಸ್ ಪತ್ತೆ
11:26 AM Jul 11, 2024 IST | Samyukta Karnataka
ಕಲಬುರಗಿ: ಬಿಬಿಎಂಪಿ ಬೆಂಗಳೂರು ವಿಭಾಗದ ಸಹಾಯಕ ಬಸವರಾಜ ಮಗ್ಗಿ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದು, ಕಲಬುರಗಿಯ ಬಸವೇಶ್ವರ ನಗರದಲ್ಲಿರುವ ಮನೆಯಲ್ಲಿ ಕ್ಯಾಷಿಯನೊ ನಾಣ್ಯಗಳು ಪತ್ತೆಯಾಗಿವೆ.
ಕಲಬುರಗಿ ಮೂಲದ ಬಸವರಾಜ ಮಗ್ಗಿ ಅವರು ನಗರದಲ್ಲಿ ಒಂದು ಮತ್ತು ಕಲಬುರಗಿ ತಾಲ್ಲೂಕಿನ ಪಾಳಾ ಸ್ವ ಗ್ರಾಮದಲ್ಲಿ ಒಂದು ಸುಸಜ್ಜಿತ ಮನೆ ಹೊಂದಿದ್ದಾರೆ. ಕಲಬುರಗಿ ಮನೆಗಳ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳು ಪರಿಶೀಲನೆ ನಡೆಸಿದ್ದಾರೆ.