For the best experience, open
https://m.samyuktakarnataka.in
on your mobile browser.

ಕೆಲಸದ ಆಮಿಷಯೊಡ್ಡಿ ಗೃಹಿಣಿಗೆ ಗಾಳ: ಆರೋಪಿ  ಬಂಧನ

02:55 PM Sep 03, 2024 IST | Samyukta Karnataka
ಕೆಲಸದ ಆಮಿಷಯೊಡ್ಡಿ ಗೃಹಿಣಿಗೆ ಗಾಳ  ಆರೋಪಿ  ಬಂಧನ

ಹುಬ್ಬಳ್ಳಿ:  ರೇಲ್ವೆ ಇಲಾಖೆಯಲ್ಲಿ  ಕೆಲಸ ‌ಕೊಡಸ್ತಿನಿ ನಿನ್ನ ಲೈಪ್ ಬದಲಾಯಿಸ್ತಿನಿ, ಅದಕ್ಕೆ ನೀನು ನನ್ನ ಜೊತೆಗೆ ಮಲಗಬೇಕು ಎಂದು ಗೃಹಿಣಿಯೊಬ್ಬಳನ್ನು ರೂಂಗೆ ಕರೆಸಿಕೊಂಡಿದ್ದ ರೈಲ್ವೆ ನೌಕರನನ್ನು ಕೇಶ್ವಾಪುರ ಪೊಲೀಸರು ಬಂಧಿಸಿದ್ದಾರೆ.
ರೈಲ್ವೆ ನೌಕರ ನದೀಂ ಎಂಬುವರನ್ನು ಬಂಧಿಸಲಾಗಿದೆ. ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ‌ ಗೆಸ್ಟ್ ಹೌಸ್‌ನಲ್ಲಿ ಮಹಿಳೆಗಾಗಿ ಕಾದು ಕುಳಿತ್ತಿದ್ದ ರೈಲ್ವೆ ನೌಕರನನ್ನು ಬಂಧಿಸಲಾಗಿದೆ.
ನದೀಂ ನೈರುತ್ಯ ರೈಲ್ವೆ ವಿಭಾಗ ಮುಖ್ಯ ಕಚೇರಿಯಲ್ಲಿ ಆರ್ಥಿಕ ವಿಭಾಗದಲ್ಲಿ ಕ್ಲರ್ಕ್ ಆಗಿ ಕಾರ್ಯ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರೈಲ್ವೆ ಜಾಬ್ ನೋಟಿಫಿಕೇಷನ್ ಪೇಜ್ ಕ್ರಿಯೆಟ್ ಮಾಡಿಕೊಂಡಿರುವ ನದೀಂ ಕೆಲಸ ಅವಶ್ಯಕತೆ ಇರುವ ಹುಡುಗಿಯರು, ಮದುವೆಯಾದ ಹೆಣ್ಣುಮಕ್ಕಳನ್ನು ಟಾರ್ಗೆಟ್ ಮಾಡಿ, ಅವರಿಗೆ ಫೇಕ್ ನೋಟಿಫಿಕೇಷನ್ ಕಳುಹಿಸುತ್ತಿದ್ದ, ಬಳಿಕ ಅವರ ಸ್ನೇಹ ಸಂಪಾದಿಸಿ, ನಿಮಗೆ ಕೆಲಸ ಕೊಡಸ್ತಿನಿ ಅದಕ್ಕೆ ನಮ್ಮ ಹಿರಿಯ ಅಧಿಕಾರಿಗಳ ಜೊತೆಗೆ ಒಂದು ದಿನ ಕಳಿಬೇಕು ಅಂತ ಕಂಡಿಷನ್ ಹಾಕುತ್ತಿದ್ದ.. ಬಳಿಕ ಇವರು ನಮ್ಮ ಆಫಿಸರ್ ಅಂತ ಫೇಕ್ ಐಡಿ ಕೊಟ್ಟು ತಾನೆ ಹುಡುಗಿಯರ ಜೊತೆ ಚಾಟ್ ಮಾಡಿ ಅವರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ.. ಇದೇ ತರಹ ಹುಬ್ಬಳ್ಳಿ ಕೇಶ್ವಾಪುರ ಮೂಲದ ಗೃಹಿಣಿಯೊಬ್ಬರಿಗೆ ಗಾಳ ಹಾಕಿದ್ದ.
ಕೆಲಸದ ಆಮಿಷಯೊಡ್ಡಿ ಗೃಹಿಣಿಗೆ ಚಾಟ್ ಮಾಡಲು ಆರಂಭಿಸಿದ ನದೀಂ ಬಳಿಕ ಗೃಹಿಣಿಯನ್ನು ಮಂಚಕ್ಕೆ ಕರೆದಿದ್ದಾನೆ. ಅಲ್ಲದೆ ನಾನು ದೆಹಲಿಯಿಂದು ಹುಬ್ಬಳ್ಳಿಗೆ ಬಂದಿದ್ದೆನೆ, ರೈಲ್ವೆ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡಿದ್ದೇನೆ. ರೂಮ್ ಗೆ ಬಾ ಅಂತ ಪೋಟೋ‌ ಕಳುಹಿಸಿದ್ದಾನೆ.
ಇದರಿಂದ ಭಯಗೊಂಡ ಗೃಹಿಣಿ ವಿಷಯವನ್ನು ತನ್ನ ಗಂಡನಿಗೆ ತಿಳಿಸಿದ್ದಾಳೆ. ತಕ್ಷಣವೇ ದಂಪತಿಗಳು ಕೇಶ್ವಾಪುರ ಠಾಣೆಗೆ ತೆರಳಿ ದೂರು ನೀಡಿದರು.
ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಪೊಲೀಸರು ಬಂಧಿಸಿದ್ದಾರೆ.
ನದೀಂ ಓರ್ವ ಐಎಎಸ್ ಅಧಿಕಾರಿಯ ಹೆಸರಿನಲ್ಲಿ ರೂಮ್ ಬುಕ್ ಮಾಡಿದ್ದ, ರೂಮ್ ಬಾಗಿಲಿಗೆ ವೆಲ್ ಕಮ್, ಯುವರ್ ಲೈಫ್ ಚೆಂಜಿಂಗ್  ಝೋನ್, ಆಜ್ ಕೆ ಬಾದ್ ಆಪಕಾ ಲೆವಲ್ ಚೆಂಜ್ ಓರಾಹೈ ಅಂತ ಬರೆದಿದ್ದ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.‌ ಸದ್ಯ ಕೇಶ್ವಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ನದೀಂ ವಿಚಾರಣೆ ನಡೆಸಿದ್ದಾರೆ.

Tags :