ಕ್ರಿಮಿನಲ್ ಪರಾರಿ ಮಾಡಿಸಿದ್ದ ಗೋವಾ ಪೊಲೀಸನನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು
ಹುಬ್ಬಳ್ಳಿ: ನಟೋರಿಯಸ್ ಕ್ರಿಮಿನಲ್ ಪರಾರಿ ಮಾಡಿಸಿದ್ದ ಗೋವಾ ಪೊಲೀಸನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹಳೇ ಹುಬ್ಬಳ್ಳಿಯ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಟೋರಿಯಸ್ ಕ್ರಿಮಿನಲ್ಗೆ ಗೋವಾದಿಂದ ಎಸ್ಕೇಪ್ ಮಾಡಲು ಸಹಾಯ ಮಾಡಿದ್ದ ಗೋವಾ ಪೊಲೀಸ್‌ನನ್ನು ಬಂಧಿಸಿದ್ದಾರೆ.
ಗೋವಾ ಪೊಲೀಸ್ ಕ್ರೈಂ ಬ್ರಾಂಚ್‌ನಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಅಮಿತ ನಾಯಕ್ ಬಂಧಿಸಲಾಗಿದೆ.
ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿ ಕಾವಲಿಗಾಗಿ ಅಮಿತ್ ನಾಯಕನನ್ನ ಕರ್ತವ್ಯಕ್ಕೆಂದು ನೇಮಕ ಮಾಡಲಾಗಿತ್ತು. ಆದ್ರೆ ಸುಲೇಮಾನ್ ಸಿದ್ದಿಕಿಯನ್ನ ನಿನ್ನೆ ಮಧ್ಯರಾತ್ರಿ ಕಸ್ಟಡಿಯಿಂದ ಪರಾರಿ ಮಾಡಿಸಿದ್ದ ಆರೋಪ ಅಮಿತ್ ನಾಯಕರ ಮೇಲಿದೆ.
ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿ ಹತ್ತಕ್ಕೂ ಹೆಚ್ಚು ರಾಜ್ಯಗಳಿಗೆ ಬೇಕಾಗಿದ್ದು, ಈತನ ಮೇಲೆ ಹೈದ್ರಾಬಾದ್, ಪುಣೆ, ದೆಹಲಿ, ಗೋವಾ ರಾಜ್ಯಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಭೂ ಮಾಫಿಯಾ ದಂಧೆಯಲ್ಲಿಯೂ ಸಾರ್ವಜನಿಕರನ್ನು ಹೆದರಿಸುವುದು ಅವರಿಂದ ದುಡ್ಡು ಕೀಳುವುದು, ದರೋಡೆ, ಮರ್ಡರ್ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಅಮಿತ್ ನಾಯಕ ಗೋವಾದಿಂದ ತಲೆ ಮರೆಸಿಕೊಳ್ಳಲು ಹುಬ್ಬಳ್ಳಿಗೆ ಆಗಮಿಸಿದ್ದ ವೇಳೆ ಹಳೆ ಹುಬ್ಬಳ್ಳಿಯ ಪೊಲೀಸರು ಬಂಧಿಸಿದ್ದಾರೆ.