For the best experience, open
https://m.samyuktakarnataka.in
on your mobile browser.

ಜಮೀರ್ ಭೇಟಿಯ ಸ್ಪಷ್ಟನೆ ನೀಡಿದ ಯತ್ನಾಳ

05:04 PM Dec 17, 2024 IST | Samyukta Karnataka
ಜಮೀರ್ ಭೇಟಿಯ ಸ್ಪಷ್ಟನೆ ನೀಡಿದ ಯತ್ನಾಳ

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಚಿವ ಜಮೀರ್ ಅಹಮದ್‌ಖಾನ್‌ ಇಬ್ಬರು ಭೇಟಿಯಾಗಿದ್ದಾರೆ.
ಈ ಕುರಿತಂತೆ ಸಚಿವ ಜಮೀರ್ ಅಹಮದ್‌ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಂಚಿಕೊಂಡು ಪೋಸ್ಟ್‌ ಮಾಡಿದ್ದರು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಚಿವರನ್ನು ಭೇಟಿಯಾದದ್ದು ಕೇವಲ ಕ್ಷೇತ್ರದ ಅಭಿವೃದ್ಧಿಯ ವಿಚಾರಗಳಿಗೆ ಸಂಬಂಧಿಸಿದಂತೆ ಹೊರತು ಯಾವುದೇ ಚರ್ಚೆಗಲ್ಲ. ವಿಜಯಪುರ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಜನರ ಆಶೋತ್ತರವನ್ನು ಈಡೇರಿಸಲು ನಾನು ಬದ್ಧನಾಗಿದ್ದೇನೆ, ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಮುಸ್ಲಿಮ್ ಸಮುದಾಯದವರಿಗೆ ಶೇ 80 ರಷ್ಟು ಉಳಿದರಲ್ಲಿ ಕ್ರೈಸ್ತರಿಗೆ ಶೇ 10 ರಷ್ಟು, ಜೈನರು, ಬೌದ್ಧರು, ಸಿಖ್, ಪಾರ್ಸಿಗಳು ಸೇರಿ ಕೇವಲ ಶೇ 10 ರಷ್ಟು ಮೀಸಲಾತಿ ನಿಗದಿಮಾಡಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿರುವದನ್ನು ವಿರೋಧಿಸಿ, ಸರ್ಕಾರದ ಗಮನಸೆಳೆಯಲಾಗಿತ್ತು. ಅದಕ್ಕಾಗಿ ವಸತಿ & ಅಲ್ಪಸಂಖ್ಯಾತರ, ಸಚಿವ ಜಮೀರ್ ಅಹ್ಮದ್ ಖಾನ್ ರವರು ತಮ್ಮ ಕಚೇರಿಯಲ್ಲಿ ಅಧಿಕಾರಿಗಳನ್ನು ಕರೆಯಿಸಿ, ಜಿಲ್ಲಾವಾರು, ಮತಕ್ಷೇತ್ರವಾರು ಜನಸಂಖ್ಯೆ ಅನುಗುಣವಾಗಿ ಧರ್ಮವಾರು,ಮೀಸಲವಾರು ಫಲಾನುಭವಿ ಆಯ್ಕೆಗೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಮತಕ್ಷೇತ್ರಕ್ಕೆ ಹೆಚ್ಚುವರಿ 1200 ಆಶ್ರಯ ಮನೆಗಳು ಮಂಜೂರು ಹಾಗೂ ನನೆಗುದಿಗೆ ಬಿದ್ದಿರುವ ಸ್ಲಂ ಮನೆಗಳು ಪೂರ್ಣಗೊಳಿಸುವ ಭರವಸೆ ನೀಡಿದ ಸಂದರ್ಭ. ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಕ್ಕೆ ವದಂತಿಗಳನ್ನು ಸೃಷ್ಟಿಸುತ್ತಿರುವವರು ನಾನು ಜೈನ್, ಸಿಖ್, ಪಾರ್ಸಿ, ಬೌದ್ಧ ಸಮಾಜದ ಫಲಾನುಭವಿಗಳ ಪರ ಮಾತನಾಡಿದ್ದೇನೆ ಹಾಗೂ ಆ ಸಮಾಜದ ಬಡವರ ಪರ ಧ್ವನಿ ಎತ್ತಿದ್ದೇನೆ ಎಂದು ಮನದಟ್ಟು ಮಾಡಿಕೊಳ್ಳಬೇಕು ಎಂದಿದ್ದಾರೆ.

Tags :