ಟಾಕ್ಸಿಕ್ ಸಿನಿಮಾ ತಂಡಕ್ಕೆ ನಿರಾಳ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
ಬೆಂಗಳೂರು: ಎಚ್‌ಎಂಟಿ ಸಂಸ್ಥೆಗೆ ಸೇರಿದ ಜಾಗದಲ್ಲಿದ್ದ ಮರಗಳನ್ನು ಟಾಕ್ಸಿಕ್ ಸಿನಿಮಾ ತಂಡ ಕಡಿದಿದೆ ಎಂಬ ಆರೋಪದ ಮೇಲೆ ಅರಣ್ಯ ಇಲಾಖೆ ದಾಖಲಿಸಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ.
ನಟ ಯಶ್ ನಟನೆಯ ಟಾಕ್ಸಿಕ್ ಸಿನಿಮಾವನ್ನು ಎಚ್‌ಎಂಟಿ ಸಂಸ್ಥೆಗೆ ಸೇರಿದ ಜಾಗದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಈ ವೇಳೆ ಆ ಜಾಗದಲ್ಲಿ ಮರಗಳನ್ನು ಕಡಿದು ಚಿತ್ರೀಕರಣ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಸಿನಿಮಾದ ನಿರ್ಮಾಣ ಸಂಸೆ ಕೆವಿನ್ ಹಾಗೂ ಮಾನ್ಸಟರ್ ಮೈಂಡ್ಸ್ ಸಂಸ್ಥೆ ವಿರುದ್ಧ ಎಫ್‌ಐಆರ್ ದಾಖಲು ಮಾಡಿತ್ತು.
ಚಿತ್ರ ತಂಡ ಮೊದಲೇ ಭಾರೀ ಮೊತ್ತದ ಹಣ ಖರ್ಚು ಮಾಡಿ ಸೆಟ್ ಅನ್ನು ನಿರ್ಮಿಸಿತ್ತು. ಈ ಆರೋಪದ ಬಳಿಕ ಸ್ವತಃ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಸೆಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಅರಣ್ಯ ಇಲಾಖೆ ಸೆಟ್ ಹಾಕುವ ಮೊದಲ ಹಾಗೂ ಸೆಟ್ ನಿರ್ಮಾಣ ಮಾಡಿದ ನಂತರದ ಸ್ಯಾಟ್‌ಲೈಟ್ ಚಿತ್ರಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಚಿತ್ರತಂಡ ಯಾವುದೇ ಮರಗಳನ್ನು ಕಡಿದಿಲ್ಲ, ಕೇವಲ ಮೈದಾನದಲ್ಲಿದ್ದ ಗಿಡಗಂಟೆಗಳನ್ನಷ್ಟೆ ಸ್ವಚ್ಛ ಮಾಡಿದೆ ಎಂಬುದನ್ನು ಸ್ಪಷ್ಟಪಡಿಸಿತ್ತು. ಆದರೆ, ಅಲ್ಲಿ ಸಾಕಷ್ಟು ಮರಗಳನ್ನು ತೆರವು ಮಾಡಿದೆ ಎಂದು ಅರಣ್ಯ ಇಲಾಖೆ ವಾದಿಸಿತ್ತು.