ಡಿನ್ನರ್ ಪಾರ್ಟಿ ಕ್ಯಾನ್ಸಲ್ ಆಗಿಲ್ಲ...
ತುಮಕೂರು: ಡಿನ್ನರ್ ಪಾರ್ಟಿ ಕ್ಯಾನ್ಸಲ್ ಆಗಿಲ್ಲ ಮುಂದೂಡಿದ್ದೇವೆ ಅಷ್ಟೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ತುಮಕೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಈ ಬಗ್ಗೆ ಈಗಾಗಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿದ್ದಾರೆ.
ಮೊನ್ನೆ ನಡೆದಿರೊ ಡಿನ್ನರ್ ಪಾರ್ಟಿ ಬಗ್ಗೆ ಗೊಂದಲ ಆಗಿದೆ. ಆ ಗೊಂದಲದ ಜೊತೆಗೆ ಇನ್ನೊಂದು ಗೊಂದಲ ಆಗೋದು ಬೇಡ ಡಿನ್ನರ್ ಪಾರ್ಟಿ ಮುಂದೂಡಿ ಎಂದು ಹೈಕಮಾಂಡ್ ಹೇಳಿದೆ ಆದ್ದರಿಂದ ಮುಂದೂಡಿದ್ದೇವೆ. ಮುಂದಿನ ದಿನಗಳಲ್ಲಿ ಮೀಟಿಂಗ್ ದಿನಾಂಕ ತಿಳಿಸುತ್ತೇವೆ ಡಿ .ಕೆ ಶಿವಕುಮಾರ್ ಬೇಜಾರು ಆಗುವುದಕ್ಕೆ ಅವರ ಆಸ್ತಿಯನ್ನು ಏನಾದರೂ ಬರೆಸಿಕೊಂಡಿದ್ದಾರಾ ಎಂದರು.
ಪ್ರೀ ಯೂನಿರ್ವಸಿಗಳಲ್ಲಿ ಎಸ್ಪಿ-ಎಸ್ಟಿ ಮಕ್ಕಳಿಗೆ ಹಾಸ್ಟೆಲ್ ಸೀಟು ಸಿಗುತ್ತಿಲ್ಲ, ಇಂತಹ ವಿಚಾರಗಳ ಬಗ್ಗೆ ನಾವು ಚರ್ಚೆ ಮಾಡಲು ಮಿಟಿಂಗ್ ಕರೆದಿದ್ದು ಹಾಸ್ಟೆಲ್ ಸೀಟ್ ಸಿಗಲ್ಲ, ಸಣ್ಣಪುಟ್ಟ ಸಾಲ ಮಾಡಿ ಮ್ಯಾನೇಜ್ಮೆಂಟ್ ಕೋಟಾದಲ್ಲಿ ಸೀಟು ತೆಗೆದುಕೊಂಡವನಿಗೆ ಸ್ಕಾಲರ್ ಶಿಪ್ ಇಲ್ಲ.
ಇದು ಎಸ್ಸಿ - ಎಸ್ಟಿ ಮಕ್ಕಳ ಜ್ವಲಂತ ಸಮಸ್ಯೆ. ಇಂತಹ ಹತ್ತು ಹಲವಾರು ಸಮಸ್ಯೆಗಳಿವೆ. ಇಂತಹವುಗಳ ಬಗ್ಗೆ ಚರ್ಚೆ ಮಾಡಲು ಮೀಟಿಂಗ್ ಕರೆದರೆ, ಇದಕ್ಕೆ ರಾಜಕೀಯ ಬಣ್ಣ ಕೊಟ್ಟು ಮೀಟಿಂಗ್ ಮಾಡಬೇಡಿ ಎಂದು ಹೇಳುವುದು ಎಸ್ಸಿ ಎಸ್ಟಿ ಸಮಾಜಕ್ಕೆ ಮಾಡುವ ಅನ್ಯಾಯವಿದು ಎಂದರು. ಫೆ. 14 ರಂದು ಎಂ.ಎಂ ಹಿಲ್ಸ್ ನಲ್ಲಿ ಕ್ಯಾಬಿನೇಟ್ ನಡೆಯುತ್ತೆ. ಚಾಮರಾಜನಗರ ಜಿಲ್ಲೆಗೆ ಹೋದರೆ ಮುಖ್ಯಮಂತ್ರಿ, ಸಚಿವ ಸ್ಥಾನ ಹೋಗುತ್ತದೆ ಅಂತ ಹೇಳುತ್ತಾರೆ. ಅಷ್ಟರೊಳಗೆ ಸಭೆ ಮಾಡುತ್ತೇವೆ.
ಇಲ್ಲ ಅಂದರೆ ಕ್ಯಾಬಿನೆಟ್ ಮೀಟಿಂಗ್ ಬಳಿಕ ಸಭೆ ಮಾಡಿ ತಿಳಿಸುತ್ತೇವೆ. ಕ್ಯಾಬಿನೇಟ್ ವಿಸ್ತರಣೆ ಯಾವುದು ಇಲ್ಲ. ಯಾವುದೇ ರಾಜಕೀಯ ತೀರ್ಮಾನಗಳಿಲ್ಲ ಎಂದರು.