ಜಾಕೀರ್ ಹುಸೇನ್ ನಿಧನ ಬಗ್ಗೆ ವದಂತಿ
09:53 PM Dec 15, 2024 IST | Samyukta Karnataka
ಸ್ಯಾನ್‌ಫ್ರಾನ್ಸಿಸ್ಕೋ: ತಬಲಾ ಮಾಂತ್ರಿಕ ಎಂದೇ ಹೆಸರಾಗಿರುವ ವಿಶ್ವವಿಖ್ಯಾತ ಜಾಕಿರ್ ಹುಸೇನ್ ಭಾನುವಾರ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ನಿಧನರಾದ ವದಂತಿ ಹಬ್ಬಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿಧನವನ್ನು ಖಚಿತಪಡಿಸಿದೆ. ಆದರೆ ಅವರ ಸೋದರ ಸಂಬಂಧಿ ಇನ್ನೂ ಮೃತಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಸಮ್ಮೇಳನಕ್ಕೆ ಅಸಾಧಾರಣ ಕೊಡುಗೆ ನೀಡಿರುವ ಹುಸೇನ್, ಕಳೆದೊಂದು ವಾರದಿಂದ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದರು
ತಬಲಾ ದಂತಕಥೆ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ವರ್ಷಗಳ ಹಿಂದೆ ಅವರ ರಕ್ತನಾಳಕ್ಕೆ ಸ್ಟಂಟ್ ಅಳವಡಿಸಲಾಗಿತ್ತು ಎಂದು ಕುಟುಂಬದ ಮೂಲ ಗಳು ತಿಳಿಸಿವೆ. ಅನೇಕ ಭಾರತೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರಗಳಿಗೆ ತಮ್ಮ ತಬಲಾ ಕೈಚಳಕದ ಮೂಲಕ ಜೀವ ತುಂಬಿದ್ದಾರೆ.