ತಿರುಪತಿಯಲ್ಲಿ ಭೀಕರ ಕಾಲ್ತುಳಿತ: ನಾಲ್ವರು ಸಾವು
10:20 PM Jan 08, 2025 IST | Samyukta Karnataka
ಬೆಂಗಳೂರು: ತಿರುಪತಿಯಲ್ಲಿ ಭೀಕರ ಕಾಲ್ತುಳಿತಕ್ಕೆ ನಾಲ್ಕು ಜನ ಬಲಿಯಾಗಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಡೆದಿದೆ.
ವೈಕುಂಠ ದ್ವಾರ ದರ್ಶನಕ್ಕೆ ಟಿಕೆಟ್ ಪಡೆಯಲು ಸಂಜೆಯಿಂದಲೇ ಜನ ಅಲ್ಲಿ ಸೇರಿದ್ದರು, ನಿರೀಕ್ಷೆ ಮೀರಿ ಜನ ಟಿಕೆಟ್‌ಗಾಗಿ ಸರತಿಯಲ್ಲಿ ನಿಂತಿದ್ದು, ನೂಕುನುಗ್ಗಲು ಉಂಟಾಗಿದೆ.
ತಿರುಪತಿಯ ವಿಷ್ಣುನಿವಾಸಂ ಬಳಿ ಈ ಘಟನೆ ನಡೆದಿದ್ದು, ಕಾಲ್ತುಳಿತದಲ್ಲಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಶಂಕಿಸಲಾಗಿದೆ.