For the best experience, open
https://m.samyuktakarnataka.in
on your mobile browser.

ತೆಂಕುತಿಟ್ಟು ಯಕ್ಷಗಾನದ ಮೊದಲ ಮಹಿಳಾ ಭಾಗವತೆ ಲೀಲಾವತಿ ಬೈಪಾಡಿತ್ತಾಯ ಇನ್ನಿಲ್ಲ

11:19 PM Dec 14, 2024 IST | Samyukta Karnataka
ತೆಂಕುತಿಟ್ಟು ಯಕ್ಷಗಾನದ ಮೊದಲ ಮಹಿಳಾ ಭಾಗವತೆ ಲೀಲಾವತಿ ಬೈಪಾಡಿತ್ತಾಯ ಇನ್ನಿಲ್ಲ

ಮಂಗಳೂರು: ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಮೊಟ್ಟಮೊದಲ ಬಾರಿಗೆ ವೃತ್ತಿಪರ ತಿರುಗಾಟ ನಡೆಸಿದ ಪ್ರಸಿದ್ಧ ಮಹಿಳಾ ಭಾಗವತ ಲೀಲಾವತಿ ಬೈಪಡಿತ್ತಾಯ ಶನಿವಾರ ಇಹಲೋಕ ತ್ಯಜಿಸಿದ್ದಾರೆ.

ಮಂಗಳೂರು ತಾಲೂಕಿನ ಬಜಪೆಯ ತಳಕಳದ ಕಲಾನುಗ್ರಹದಲ್ಲಿ ಶನಿವಾರ ಸಂಜೆ ಗಾನಲೀನವಾಗಿದ್ದಾರೆ. ಸುಮಾರು 40 ವರ್ಷಗಳ ಕಾಲ ಯಕ್ಷರಂಗದಲ್ಲಿ ಭಾಗವತಿಕೆಯಲ್ಲಿ ಮಿಂಚಿದ ಗಾನಗಾರುಡಿ ಲೀಲಾವತಿ ಬೈಪಡಿತ್ತಾಯ(78) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಇವರ ಅಂತಿಮ ಸಂಸ್ಕಾರ ಡಿ.15ರಂದು ಸ್ವಗೃಹದಲ್ಲೇ ನಡೆಯಲಿದೆ.