ದರೋಡೆಕೋರನ ಮೇಲೆ ಫೈರಿಂಗ್
09:02 AM Oct 07, 2024 IST | Samyukta Karnataka
ಹುಬ್ಬಳ್ಳಿ: ತಪ್ಪಿಸಿಕೊಳ್ಳಲು ಯತ್ನಿಸಿದ ದರೋಡೆಕೋರ ಮಹೇಶ ಸೀತಾರಾಮ ಕಾಳೆ ಮೇಲೆ ಗೋಕುಲ ರೋಡ್ ಠಾಣೆ ಪಿಎಸ್ ಐ ಸಚಿನ್ ದಾಸರೆಡ್ಡಿ ಗುಂಡು ಹಾರಿಸಿದ್ದಾರೆ. ಡಕಾಯಿತಿ ತಂಡದಲ್ಲಿ ೫-೬ ಜನರು ಇದ್ದರು. ಕರೆತರುವ ವೇಳೆ ರೇವಡಿಹಾಳ ಬ್ರಿಡ್ಜ್ ಬಳಿ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಪೊಲೀಸ್ ಅಧಿಕಾರಿ ಗುಂಡು ಹಾರಿಸಿದ್ದಾರೆ.
ಗಾಯಗೊಂಡ ಕಾಳೆ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಕೆಎಂಸಿಆರ್ ನಲ್ಲಿ ಚಿಕಿತ್ಸೆ ಗೆ ದಾಖಲಿಸಲಾಗಿದೆ.