For the best experience, open
https://m.samyuktakarnataka.in
on your mobile browser.

ಧರ್ಮಸ್ಥಳದ ಶ್ರೀ ಸಾನ್ನಿಧ್ಯ ಸರತಿ ಸಂಕೀರ್ಣ ವ್ಯವಸ್ಥೆ ಉದ್ಘಾಟನೆ

05:03 PM Jan 07, 2025 IST | Samyukta Karnataka
ಧರ್ಮಸ್ಥಳದ ಶ್ರೀ ಸಾನ್ನಿಧ್ಯ ಸರತಿ ಸಂಕೀರ್ಣ ವ್ಯವಸ್ಥೆ ಉದ್ಘಾಟನೆ

ಮಂಜುನಾಥ ಸ್ವಾಮಿ ನೆಲೆಸಿರುವ ಧರ್ಮಸ್ಥಳ ಶಾಂತಿ, ನೆಮ್ಮದಿ, ಆಧ್ಯಾತ್ಮಿಕ ಅನುಭೂತಿ ನೀಡುವ ಸ್ಥಳವಾಗಿದೆ

ಮಂಗಳೂರು: ತಿರುಪತಿ ತಿಮ್ಮಪ್ಪನ ದರ್ಶನದ ಮಾದರಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯದಲ್ಲೂ ಭಕ್ತರು ದರ್ಶನ ಪಡೆಯಲು ಅನುಕೂಲವಾಗುವ ಶ್ರೀ ಸಾನ್ನಿಧ್ಯ ಸರತಿ ಸಂಕೀರ್ಣ ವ್ಯವಸ್ಥೆಯನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಇಂದು ಉದ್ಘಾಟಿಸಿದರು. ಇದೇ ವೇಳೆ 2024-25ನೇ ಸಾಲಿನ ಜ್ಞಾನದೀಪ ಕಾರ್ಯಕ್ರಮಕ್ಕೂ ಉಪರಾಷ್ಟ್ರಪತಿ ಚಾಲನೆ ನೀಡಿದರು. ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ಅತ್ಯಾಧುನಿಕ ಸೌಲಭ್ಯ ಕಲ್ಪಿಸಿರುವುದು ಸೇವೆಯ ಮಹೋನ್ನತ ಸಾಕಾರವಾಗಿದೆ. ಧಾರ್ಮಿಕ ಸ್ಥಳಗಳು ಸಮಾನತೆಯನ್ನು ಪ್ರತಿಪಾದಿಸುವ ಕೇಂದ್ರಗಳಾಗಿವೆ. ದೇವರ ಎದುರು ಎಲ್ಲರೂ ಸಮಾನರು. ಈ ಹಿನ್ನೆಲೆಯಲ್ಲಿ, ಧಾರ್ಮಿಕ ಕೇಂದ್ರಗಳು ವಿಐಪಿ, ವಿವಿಐಪಿ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದು ಸಮಾನತೆಗೆ ವಿರುದ್ಧವಾದ ಧೋರಣೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ, ಅವರ ಪತ್ನಿ ಹೇಮಾವತಿ ಹೆಗ್ಗಡೆ , ಸಂಸದ ಬ್ರಿಜೇಶ್ ಚೌಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags :