ನಂದಿನಿ: ದೋಸೆ ಹಿಟ್ಟು ಉತ್ಪನ್ನವನ್ನು ಸರ್ಕಾರ ನಿಲ್ಲಿಸಿದ್ದೇಕೆ
11:08 AM Dec 05, 2024 IST | Samyukta Karnataka
ಬೆಂಗಳೂರು: ನಂದಿನಿ ಬ್ರಾಂಡ್ ದೋಸೆ ಹಿಟ್ಟು ಉತ್ಪನ್ನವನ್ನು ಸರ್ಕಾರ ನಿಲ್ಲಿಸಿದ್ದೇಕೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಕೇರಳ ಲಾಬಿಗೆ ಮಣಿದು ಕೆಎಂಎಫ್‌ನ ಮಹತ್ವಾಕಾಂಕ್ಷೆಯ ಇಡ್ಲಿ ಹಾಗೂ ದೋಸೆ ಹಿಟ್ಟು ಉತ್ಪನ್ನವನ್ನು ರಾಜ್ಯ ಸರ್ಕಾರ ನಿಲ್ಲಿಸಿದೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ. ಜತೆಗೆ ಈ ಉತ್ಪನ್ನದ ಪ್ರಾರಂಭಕ್ಕೆ ಒತ್ತಾಸೆಯಾಗಿ ನಿಂತಿದ್ದ ಅಧಿಕಾರಿಯನ್ನೂ ಎತ್ತಂಗಡಿ ಮಾಡಲಾಗಿದೆ. ಸರ್ಕಾರದ ಈ ನಡೆ ನಿಗೂಢವಾಗಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ರಚನಾತ್ಮಕ ಕಾರ್ಯ ಅಸಾಧ್ಯ ಎಂಬುದಕ್ಕೆ ಇದೊಂದು ಉದಾಹರಣೆಯಲ್ಲವೇ ? ಎಂದು ಪ್ರಶ್ನಿಸಿದ್ದಾರೆ.