ನಕ್ಸಲ್ ಚಟುವಟಿಕೆ ಇತಿಹಾಸಕ್ಕೆ ಕೊನೆ ಹಾಡುವ ಕ್ಷಣ ಸನ್ನಿಹಿತ
ಸರ್ಕಾರದ ಸೂಚನೆಯಂತೆ ಶರಣಾಗತಿಗೆ ೬ ನಕ್ಸಲರು ಮುಖ್ಯವಾಹಿನಿಗೆ ಬರಲು ಎಲ್ಲಾ ಸಿದ್ಧತೆ
ಚಿಕ್ಕಮಗಳೂರು: ದಕ್ಷಿಣ ಭಾರತದ ಪಶ್ಚಿಮಘಟ್ಟದಲ್ಲಿದ್ದ ನಕ್ಸಲ್ ಚಟುವಟಿಕೆ ಇತಿಹಾಸಕ್ಕೆ ಕೊನೆ ಹಾಡುವ ಕ್ಷಣ ಸನ್ನಿಹಿತವಾಗಿದೆ. ಸರ್ಕಾರದ ಸೂಚನೆಯಂತೆ ಶರಣಾಗತಿಗೆ ೬ ನಕ್ಸಲರು ಮುಖ್ಯವಾಹಿನಿಗೆ ಬರಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ಬುಧವಾರ ಬೆಳಿಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಕ್ರಿಯೆಗಳು ನಡೆದು ಮುಖ್ಯ ವಾಹಿನಿಗೆ ಸೇರ್ಪಡೆಗೊಳ್ಳಲಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರುಲತಾ, ದಕ್ಷಿಣ ಕನ್ನಡದ ಸುಂದರಿ ಕುತ್ತೂರು, ಬಾಳೆಹೊಳೆಯ ವನಜಾಕ್ಷ, ಆಂಧ್ರಪ್ರದೇಶ ಜಯಣ್ಣ, ತಮಿಳುನಾಡಿನ ಕೆ.ವಸಂತ, ಕೇರಳದ ಟಿ.ಎನ್.ಜೀಶ ಮುಖ್ಯವಾಹಿನಿಗೆ ಬರವ ಪ್ರಮುಖ ನಕ್ಸಲರಾಗಿದ್ದು, ಇವರ ಪತ್ತೆಗೆ ಲಕ್ಷಾಂತರ ರೂ.ಗಳ ತೆಲೆದಂಡ ನಿಗದಿಯಾತ್ತು .
ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಬಂಜಗೆರೆ ಜಯಪ್ರಕಾಶ್, ಕೆ.ಪಿ. ಶ್ರೀಪಾಲ್, ಪಾರ್ವತೀಶ್, ಶಾಂತಿಗಾಗಿ ನಾಗರಿಕ ವೇದಿಕೆಯ ನೂರ್ ಶ್ರೀಧರ್, ಕೆ.ಎಲ್.ಅಶೋಕ್, ವಿ.ಎಸ್.ಶ್ರೀಧರ್, ನಗರಗೆರೆ ರಮೇಶ್, ಎನ್.ವೆಂಕಟೇಶ್, ತಾರಾರಾವ್ ಒಳಗೊಂಡ ತಂಡವು ಸರ್ಕಾರ ಮತ್ತು ನಕ್ಸಲರ ಗುಂಪಿನ ನಡುವೆ ಮಧ್ಯಸ್ಥಿಕೆ ವಹಿಸಿತ್ತು
ಈಗ ಶರಣಾಗುತ್ತಿರುವ ಮುಂಡಗಾರು ಲತಾ ಮೇಲೆ ೩೯ ಪ್ರಕರಣಗಳಿವೆ. ಸುಂದರಿಯ ಮೇಲೆ ೩, ಜಯಣ್ಣ ೩, ವನಜಾಕ್ಷಿ ೧೫, ತಮಿಳುನಾಡಿನ ಕೆ.ವಸಂತ ಮತ್ತು ಟಿ.ಎನ್. ಜೀಶ್ ಅವರ ಮೇಲೆ ಎಷ್ಟು ಪ್ರಕರಣಗಳಿವೆ ಎಂಬುದು ತಿಳಿದುಬಂದಿಲ್ಲ.