ನಮ್ಮ ಮೆಟ್ರೋ: ಹಳದಿ ಮಾರ್ಗಕ್ಕೆ ಪ್ರಥಮ ಬೋಗಿ
ನಮ್ಮ ಮೆಟ್ರೋದ 204 ಬೋಗಿಗಳ ನಿರ್ಮಾಣದ ಕಾಂಟ್ರಾಕ್ಟ್ ಪಡೆದಿರುವ ಟೀಟಾಘರ್ ರೈಲು ನಿಗಮ
ಬೆಂಗಳೂರ: ನಮ್ಮ ಮೆಟ್ರೋ - ಹಳದಿ ಮಾರ್ಗದ ಪ್ರಥಮ ರೈಲು ಬೋಗಿಗಳಿಗೆ ಇಂದು ಕೊಲ್ಕತ್ತಾದಲ್ಲಿ ಚಾಲನೆ ನೀಡಲಾಯಿತು,
ಈ ಕುರಿತಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಾಮಾಜೀಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ನಮ್ಮ ಮೆಟ್ರೋದ 204 ಬೋಗಿಗಳ ನಿರ್ಮಾಣದ ಕಾಂಟ್ರಾಕ್ಟ್ ಪಡೆದಿರುವ ಟೀಟಾಘರ್ ರೈಲು ನಿಗಮವು, ಇಂದು ಪ್ರಥಮ ಬೋಗಿಯನ್ನು ನಮ್ಮ ಮೆಟ್ರೊಗೆ ಒದಗಿಸಿದೆ. ಈ ಮಧ್ಯೆ ಹಲವು ಬಾರಿ ನಾನು ಟೀಟಾಘರ್ ನ ಘಟಕಕ್ಕೆ ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಿದ್ದು, ಶೀಘ್ರ ಕಾರ್ಯಾರಂಭಕ್ಕೆ ಸಹಕಾರ ನೀಡಿರುವ ಕೇಂದ್ರ ಸಚಿವರಿಗೆ ಬೆಂಗಳೂರು ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
![](https://samyuktakarnataka.in/wp-content/uploads/2025/01/ನಮ್ಮ-ಮೆಟ್ರೋ-02-1024x683.jpg)
ಟೀಟಾಘರ್‌ನಲ್ಲಿ ತಯಾರಾಗಿರುವ ಮೊದಲ ಮೆಟ್ರೋ ಬೋಗಿಗಳಿಗೆ ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಅವರು ಚಾಲನೆ ನೀಡಿದ್ದಾರೆ. ಇದರೊಂದಿಗೆ ಪ್ರತಿ ತಿಂಗಳೂ ಒಂದು ಬೋಗಿ ನಿಯೋಜಿತ ಮೆಟ್ರೋ ಲೈನ್‌ಗೆ ಸೇರಿಕೊಳ್ಳಲಿದ್ದು, ನಂತರ ಪ್ರತೀ ತಿಂಗಳೂ 2 ಬೋಗಿಗಳು ಈ ಮಾರ್ಗಕ್ಕೆ ಸೇರಲಿವೆ. ಜಯನಗರದ ಆರ್ ವಿ ರೋಡ್‌ನಿಂದ, ಬೊಮ್ಮಸಂದ್ರದ ವರೆಗಿನ 18.8 ಕಿಮೀ ಉದ್ದದ ಹಳದಿ ಮಾರ್ಗದ ಆರಂಭಗೊಂಡಲ್ಲಿ ಬೆಂಗಳೂರು ದಕ್ಷಿಣ & ಐಟಿ,ಬಿಟಿ ಕಾರಿಡಾರ್‌ಗಳ ಸಂಪರ್ಕಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದಿದ್ದಾರೆ.
![](https://samyuktakarnataka.in/wp-content/uploads/2025/01/ನಮ್ಮ-ಮೆಟ್ರೋ-03-1024x683.jpg)