ಪತ್ರಕರ್ತರು ಸಾಗುತ್ತಿದ್ದ ಕಾರಿನಡಿ ನಾಡ ಬಾಂಬ್ ಸ್ಫೋಟ
07:59 PM Jul 02, 2024 IST | Samyukta Karnataka
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಗುಂದ ಗ್ರಾಮದ ಬಳಿ ಪತ್ರಕರ್ತರು ಸಾಗುತ್ತಿದ್ದ ಕಾರಿನ ಕೆಳಗೆ ನಾಡ ಬಾಂಬ್ ಸ್ಫೋಟವಾದ ಘಟನೆ ನಡೆದಿದೆ.
ಕಾರಿನಲ್ಲಿ ಮೂವರು ಪತ್ರಕರ್ತರು ಇದ್ದು ಶಾಸಕ ಆರ್.ವಿ. ದೇಶಪಾಂಡೆ ಸಭೆಗೆ ತೆರಳುತ್ತಿದ್ದರು. ಜೋಯಿಡಾದ ಗುಂದ ಗ್ರಾಮದ ಬಳಿ ಕಾರಿನ ಟಯರ್‌ಗೆ ಸಿಕ್ಕಿ ಬಾಂಬ್ ಸ್ಫೋಟವಾಗಿದೆ. ಅದೃಷ್ಟವಶಾತ್ ಪತ್ರಕರ್ತರು ಅಪಾಯದಿಂದ ಪಾರಾಗಿದ್ದಾರೆ.ಇನ್ನು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.