ಪುಟ್ಟ ಕಂದನಿಗೆ ಶ್ರೀರಾಮ ಎಂದು ನಾಮಕರಣ
ಚಿತ್ರದುರ್ಗ: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠಾನೆ ದಿನದ ಇಂದು ವಿಶ್ವದೆಲ್ಲೇಡೆ ಶ್ರೀರಾಮ ಜಪ ಪಠಿಸುತ್ತಿದ್ದು, ಕೋಟೆನಾಡು ಚಿತ್ರದುರ್ಗದಲ್ಲಿ ಪುಟ್ಟ ಕಂದನಿಗೆ ಶ್ರೀರಾಮ ಎಂದು ನಾಮಕರಣ ಮಾಡಲಾಗಿದೆ.
ವಿಶ್ವದ ಬಹುಸಂಖ್ಯಾತ ಜನರ ಎಷ್ಟೋ ವರ್ಷಗಳ ಕನಸ್ಸಾಗಿರುವಂತಹ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠಾನೆ ಇಂದು ನೆರವೇರುತ್ತಿದ್ದು, ಇಂದು ಇಡೀ ದೇಶಕ್ಕೆ ತುಂಬಾ ಶ್ರೇಷ್ಠವಾದ ದಿನವಾಗಿದೆ. ಈ ಸಂದರ್ಭದಲ್ಲಿ ಚಿತ್ರದುರ್ಗದ ಗಾಂಧಿನಗರ ಬಡಾವಣೆಯ ನಿವಾಸಿಗಳಾದ ಸಾಗರ್ ಹಾಗೂ ಭಾವನಾ ಅವರ ಪುತ್ರ ಪುಟ್ಟ ಕಂದನಿಗೆ ಶ್ರೀರಾಮ ಎಂದು ನಾಮಕರಣ ಮಾಡಲಾಗಿದೆ.
ಬಾಲ ರಾಮನ ಪ್ರಾಣಪ್ರತಿಷ್ಠಾಪನೆ ಸಮಯವಾದ 12.30 ರಿಂದ 32 ಸೆಕೆಂಡುಗಳ ಸಮಯದಲ್ಲೇ ಸಾಗರ್, ಭಾವನಾ ತಮ್ಮ ಪುತ್ರನಿಗೆ ಶ್ರೀರಾಮ ಎಂದು ನಾಮಕರಣ ಮಾಡಿದರು.
ಈ ವೇಳೆ ಮಾತನಾಡಿರುವ ಪುಟ್ಟ ಕಂದನ ತಾಯಿ ಭಾವನ, ಇಂದು ಇಡೀ ದೇಶಕ್ಕೆ ತುಂಬಾ ಶ್ರೇಷ್ಠವಾದ ದಿನವಾಗಿದೆ. ಈ ದಿನ ಬಿಟ್ಟರೆ ಮುಂದೆ ಇಂತಹ ದಿನ ಮತ್ತೆ ಸಿಗುವುದಿಲ್ಲ. ಹಾಗಾಗಿಯೇ ನನ್ನ ಮಗನಿಗೆ ಶ್ರೀರಾಮ ಎಂಬ ಹೆಸರನ್ನುನಾಮಕರಣ ಮಾಡಲಾಗಿದೆ.
ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣಪ್ರತಿಷ್ಠಾಪನೆ ಮಾಡಲು ದಿನಾಂಕ ಘೋಷಣೆಯಾದ ದಿನವೇ ನಾವು ಸೇರಿದಂತೆ ಕುಟುಂಬಸ್ಥರೆಲ್ಲರೂ ಅದೇ ಸಮಯದಲ್ಲೇ ನಮ್ಮ ಕಂದನಿಗೆ ಶ್ರೀರಾಮ ಎಂದು ನಾಮಕರಣ ಮಾಡಲು ಉತ್ಸುಕರಾಗಿ ಸಜ್ಜಾಗಿದ್ದೆವು. ಇಡೀ ವಿಶ್ವವೇ ಅಯೋಧ್ಯೆಯತ್ತ ತಿರುಗಿ ನೋಡುತ್ತಿದೆ. ಇಂತಹ ಪುಣ್ಯ ದಿನ ನಮ್ಮ ಮಗುವಿಗೆ ಸಿಕ್ಕಿರುವುದು ನಮ್ಮ ಪುಣ್ಯ ಎಂದು ತಿಳಿಸಿದ್ದಾರೆ.