For the best experience, open
https://m.samyuktakarnataka.in
on your mobile browser.

ಪುರುಷರ ವಿರುದ್ಧ ಸುಳ್ಳು ಕೇಸ್: `ಸುಪ್ರೀಂ' ಕಳವಳ

11:01 PM Dec 11, 2024 IST | Samyukta Karnataka
ಪುರುಷರ ವಿರುದ್ಧ ಸುಳ್ಳು ಕೇಸ್   ಸುಪ್ರೀಂ  ಕಳವಳ

ನವದೆಹಲಿ: ಮಹಿಳೆಯರನ್ನು ವರದಕ್ಷಿಣೆ ಕ್ರೌರ್ಯ ದಿಂದ ರಕ್ಷಿಸುವ ವರದಕ್ಷಿಣೆ ಕಾನೂನನ್ನು ದುರುಪ ಯೋಗ ಪಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇಂಥ ಪ್ರಕರಣಗಳ ತೀರ್ಪು ನೀಡುವಾಗ ಮುಗ್ಧ ಜನರಿಗೆ ಅನಗತ್ಯ ಕಿರುಕುಳ ಆಗದಂತೆ ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.
ನಿರ್ದಿಷ್ಟ ಆರೋಪಗಳಿಲ್ಲದ ಪ್ರಕರಣಗಳನ್ನು ಮೊಳಕೆಯಲ್ಲೇ ಚಿವುಟಿಹಾಕಬೇಕು ಎಂದಿರುವ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಎನ್.ಕೋಟೀಶ್ವರ್ ಸಿಂಗ್ ಅವರ ಪೀಠ, ಈ ಕಾನೂನನ್ನು ಹೆಂಡತಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ತೆಲಂಗಾಣದ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರು ತಮ್ಮ ಮೇಲೆ ಹೂಡಿರುವ ವರದಕ್ಷಿಣೆ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಳ್ಳಿ ಹಾಕಿರುವುದನ್ನು ಪ್ರಶ್ನಿಸಿ ಸುಪ್ರೀಂಗೆ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿ ಯೊಂದರ ವಿಚಾರಣೆ ಸಂದರ್ಭದಲ್ಲಿ
ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಆಕೆಯ ಗಂಡ ಮತ್ತಿತರ ಸಂಬಂಧಿಕರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿರುವ ಐಪಿಸಿ ಸೆಕ್ಷನ್ ದುರುಪ ಯೋಗವಾಗುತ್ತಿರುವುದಕ್ಕೆ ನಾನಾ ವಲಯಗಳಲ್ಲಿ ಆಗಿಂದಾಗ್ಗೆ ಆಕ್ಷೇಪ ಕೇಳಿ ಬರುತ್ತಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಉತ್ತರ ಪ್ರದೇಶದ ೩೪ ವರ್ಷದ ಅತುಲ್ ಸುಭಾಶ್ ಎನ್ನುವವರು ಹೆಂಡತಿ ಯಿಂದ ಕಿರುಕುಳ ಆತ್ಮಹತ್ಯೆ ಮಾಡಿಕೊಂಡಿರುವುದು, ವರದಕ್ಷಿಣೆ ನಿಷೇಧ ಕಾನೂನುಗಳ ದುರುಪಯೋಗದ ಕುರಿತು ರಾಷ್ಟ್ರವ್ಯಾಪಿ ಚರ್ಚೆ ಹುಟ್ಟು ಹಾಕಿರುವ ಸಂದರ್ಭದಲ್ಲಿ ಕೋರ್ಟ್ನ ಈ ಅವಲೋಕನ ಮಹತ್ವದ್ದಾಗಿವೆ.