ಬಂದ್‌ಗೆ ಬಲವಂತ ಮಾಡಿದ್ರೆ ಕ್ರಮ...
ಹುಬ್ಬಳ್ಳಿ: ದಲಿತಪರ ಸಂಘಟನೆಗಳು ಹು-ಧಾ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್ ಕಮಿಷನರೇಟ್ ಫುಲ್ ಅಲರ್ಟ್ ಆಗಿದೆ. ಬುಧವಾರ ಮಧ್ಯಾಹ್ನದ ಹೊತ್ತಿಗೆ ನಗರದ ರಾಣಿ ಚನ್ನಮ್ಮ (ಈದ್ಗಾ) ಮೈದಾನದಲ್ಲಿ ಮುಂಜಾಗೃತಾ ಕ್ರಮವಾಗಿ ತಾಲೀಮು ನಡೆಸಿದರು.
ಈ ವೇಳೆ ಮಾಧ್ಯಮದವವರೊಂದಿಗೆ ಮಾತನಾಡಿದ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಬಂದ್ ಎಂಬ ಕಾನ್ಸೆಪ್ಟೇ ಇಲ್ಲ. ಭಾರತ ಬಂದ್, ಕರ್ನಾಟಕ ಬಂದ್ ಹೀಗೆ ಲೋಕಾರೂಢಿಯಾಗಿ ಕರೆದುಕೊಂಡು ಬರಲಾಗಿದೆ. ಒಂದು ನಿರ್ದಿಷ್ಟ ವಿಷಯ ಆಧಾರಿತವಾಗಿ ಪ್ರತಿಭಟನೆ ನಡೆಸಲು ಅವಕಾಶವಿದೆ. ಈ ರೀತಿಯ ಪ್ರತಿಭಟನೆ ನಡೆದಾಗ ಅದಕ್ಕೆ ತಕ್ಕಂತೆ ಸೂಕ್ತ ಬಂದೋಬಸ್ತ್ ಪೊಲೀಸ್ ಇಲಾಖೆ ಮಾಡುತ್ತದೆ. ಅದನ್ನೇ ನಾವು ಮಾಡುತ್ತಿದ್ದೇವೆ. ಗುರುವಾರ ಬಂದ್‌ಗೆ ಕರೆ ನೀಡಿರುವ ಸಂಘಟನೆಗಳ ಪ್ರಮುಖರೊಂದಿಗೆ ಮಾತನಾಡಲಾಗಿದೆ. ಸಭೆಯನ್ನೂ
ನಡೆಸಲಾಗಿದೆ. ಸ್ವಯಂ ಪ್ರೇರಿತ ಬಂದ್‌ಗೆ ಕೋರಿದ್ದಾರೆ. ಸ್ವಯಂ ಪ್ರೇರಿತ ಬಂದ್ ಮಾಡುವವರು ಮಾಡಬಹುದು. ಯಾರಾದರೂ ಬಲವಂತದಿಂದ ಬಂದ್ ಮಾಡಿಸಿದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
ಡಿಸಿಪಿ, ಎಸಿಪಿ, ಪಿಎಸ್‌ಐ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಒಟ್ಟು ೨೦೦೦ಕ್ಕೂ ಹೆಚ್ಚು ಪೊಲೀಸರನ್ನು ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.