For the best experience, open
https://m.samyuktakarnataka.in
on your mobile browser.

ಬಾಂಗ್ಲಾ ಹಿಂದುಗಳ ದೌರ್ಜನ್ಯ ಖಂಡಿಸಿ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ

01:06 PM Dec 05, 2024 IST | Samyukta Karnataka
ಬಾಂಗ್ಲಾ ಹಿಂದುಗಳ ದೌರ್ಜನ್ಯ ಖಂಡಿಸಿ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ

ಕೊಪ್ಪಳ: ಬಾಂಗ್ಲಾದೇಶದ ಹಿಂದೂಗಳ ಹಾಗೂ ಮಂದಿರಗಳ ಮೇಲಿನ ದಾಳಿಯನ್ನು ಖಂಡಿಸಿ ನಗರದ ಅಶೋಕ ವೃತ್ತದಲ್ಲಿ ಗುರುವಾರ ನಮ್ಮವರ ರಕ್ಷಣೆಗೆ ನಮ್ಮ ಧ್ವನಿ ನೇತೃತ್ವದಲ್ಲಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಗಡಿಯಾರ ಕಂಬದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಜವಾಹರ ರಸ್ತೆಯ ಮೂಲಕ ಅಶೋಕ ವೃತ್ತ ತಲುಪಿತು. ಹನುಮಮಾಲಾಧಾರಿಗಳು ಭಾಗವಹಿಸಿದರು. ಉಪವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿಗೆ ಮನವಿ ಸಲ್ಲಿಸಿದರು.

ದದೇಗಲ್ ಸಿದ್ಧಾರೂಢ ಮಠದ ಆತ್ಮಾನಂದ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ, ಡಾ.ಕೆ.ಜಿ.ಕುಲಕರ್ಣಿ, ಪ್ರದೀಪ ಹಿಟ್ನಾಳ, ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ಪ್ರಶಾಂತ ಜೈನ್, ಮುಖಂಡರಾದ ಗವಿಸಿದ್ದಪ್ಪ ಕಂದಾರಿ, ಚಂದ್ರಶೇಖರ ಕವಲೂರು, ಮಧುರಾ ಕರಣಂ, ಬಸವರಾಜ ಗೌರಾ, ಪ್ರಾಣೇಶ ಮಾದಿನೂರು, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ, ಮಹೇಶ ಅಂಗಡಿ, ವಾಸುದೇವ ಮೇಘರಾಜ, ಮಹಾಲಕ್ಷ್ಮಿ ಕಂದಾರಿ, ಕೀರ್ತಿ ಪಾಟೀಲ್ ಇದ್ದರು.

Tags :