For the best experience, open
https://m.samyuktakarnataka.in
on your mobile browser.

ಬಾಲಕಿಯ ಮೇಲೆ ಅತ್ಯಾಚಾರ: ಟಿಎಂಸಿ ನಾಯಕನ ಮನೆ ಧ್ವಂಸ

10:40 PM Sep 01, 2024 IST | Samyukta Karnataka
ಬಾಲಕಿಯ ಮೇಲೆ ಅತ್ಯಾಚಾರ  ಟಿಎಂಸಿ ನಾಯಕನ ಮನೆ ಧ್ವಂಸ

ಕೋಲ್ಕತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾ ದಲ್ಲಿ ಸ್ನಾತಕೋತ್ತರ ವೈದ್ಯವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಉದ್ವಿಗ್ನತೆ ಇನ್ನೂ ಮುಂದುವರಿದಿರುವಾಗಲೇ, ಉತ್ತರ ೨೪ ಪರಗಣ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ಅತ್ಯಾಚಾರದ ಪ್ರಕರಣ ವರದಿಯಾಗಿದೆ.
ಟಿಎಂಸಿ ಪಂಚಾಯ್ತಿ ಸದಸ್ಯೆಯ ಪತಿ ಈ ಕೃತ್ಯ ಎಸಗಿದ್ದು, ಆಕ್ರೋಶಗೊಂಡ ಜನ ಆರೋಪಿಯ ಮನೆ ಮತ್ತು ಅವನ ಸಂಬಂಧಿಕರಿಗೆ ಸೇರಿದ ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ. ಶನಿವಾರ ರಾತ್ರಿ ರಾಜಬರಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ರೊಚ್ಚಿಗೆದ್ದ ಜನ ಆರೋಪಿಯ ಮನೆ ಮತ್ತು ಅವನ ಸಂಬಂಧಿಕರ ಅಂಗಡಿಯನ್ನು ಧ್ವಂಸಗೊಳಿಸಿದೆ. ಗುಂಪನ್ನು ಚದುರಿಸಲು ಅಶ್ರುವಾಯು ಬಳಸಬೇಕಾಯಿತು.
ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾ ಗಿದ್ದು, ಭದ್ರತೆಗೆ ಆರ್‌ಎಎಫ್ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರತಿಪಕ್ಷ ಸಿಪಿಎಂ ಬೆಂಬಲಿಗರು ದಾಳಿ ನಡೆಸಿದ್ದಾರೆ ಎಂದು ಪಂಚಾಯತ್ ಸದಸ್ಯರ ಕುಟುಂಬ ಆರೋಪಿಸಿದೆ. ಇನ್ನೊಂದು ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಬೀರಭೂಮ್‌ನಲ್ಲಿ ದಾದಿಯೊಬ್ಬರು ಶುಶ್ರೂಷೆ ನೀಡುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಪ್ರಕರಣ ದಾಖಲಾಗಿದೆ. ಪೊಲೀಸರು ರೋಗಿಯನ್ನು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಹೌಡಾ ಜಿಲ್ಲೆಯಲ್ಲಿ ಲ್ಯಾಬ್ ಟೆಕ್ನಿಷಿ ಯನ್ ಒಬ್ಬ ಬಾಲಕಿಯ ಮೇಲೆ ಲೈಂಗಿಕ ಹಿಂಸೆ ನೀಡಿರುವ ಘಟನೆ ವರದಿಯಾಗಿದೆ.