For the best experience, open
https://m.samyuktakarnataka.in
on your mobile browser.

ಬಿಜೆಪಿಯ 3 ಮುಖ್ಯಮಂತ್ರಿಗಳು ಏಕೆ ಕ್ರಮ ಕೈಗೊಳ್ಳಲಿಲ್ಲ?

10:59 AM Dec 18, 2024 IST | Samyukta Karnataka
ಬಿಜೆಪಿಯ 3 ಮುಖ್ಯಮಂತ್ರಿಗಳು ಏಕೆ ಕ್ರಮ ಕೈಗೊಳ್ಳಲಿಲ್ಲ

ಕಳೆದ 10 ವರ್ಷದಿಂದಲೂ ಬಿಜೆಪಿ ಹಾಗೂ ಅದರ ಫೇಕ್ ಫ್ಯಾಕ್ಟರಿಯು ನಮ್ಮ ಕುಟುಂಬ 50,000 ಕೋಟಿ ಆಸ್ತಿ ಹೊಂದಿದೆ ಎನ್ನುತ್ತಿದ್ದಾರೆ,

ಬೆಂಗಳೂರು: ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳಲ್ಲಿ ಒಂದೇ ಒಂದನ್ನು ಸಾಬೀತು ಮಾಡಿ ತೋರಿಸಲಿ ಎಂದು ಬಿಜೆಪಿಯವರಿಗೆ‌ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕರ್ನಾಟಕ ಬಿಜೆಪಿ ಪಕ್ಷವು ತಮ್ಮ ರಾಜ್ಯಾಧ್ಯಕ್ಷರ ಮೇಲಿನ ಆರೋಪಗಳನ್ನು ಮತ್ತು ಹಗರಣಗಳನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿ ಹಾಸ್ಯಾಸ್ಪದವಾಗಿ ನಡೆದುಕೊಳ್ಳುತ್ತಿದೆ.

ನಮ್ಮ ಕುಟುಂಬ ವಕ್ಫ್ ಹಗರಣದಲ್ಲಿ ಭಾಗಿಯಾಗಿದೆ ಎನ್ನುವ ವರದಿ ನಿಜವೇ ಆಗಿದ್ದರೆ, ಬಿಜೆಪಿಯ 3 ಮುಖ್ಯಮಂತ್ರಿಗಳು ಆ ವರದಿಯ ಆಧಾರದಲ್ಲಿ ಏಕೆ ಕ್ರಮ ಕೈಗೊಳ್ಳಲಿಲ್ಲ? ಅವರು ತಮ್ಮ ಬೆರಳು ಚೀಪುತ್ತಾ ಕುಳಿತಿದ್ದರೇ?

ಬಿಜೆಪಿ ಸ್ಪಷ್ಟ ಉತ್ತರ ನೀಡಬೇಕಾದ ಪ್ರಶ್ನೆಗಳು..

  • 4,00,000 ಕೋಟಿ ವಕ್ಫ್ ಹಗರಣದ ಆರೋಪವಿರುವ ಅನ್ವರ್ ಮಾಣಿಪ್ಪಾಡಿಯ ವರದಿಯನ್ನು ಬಿಜೆಪಿಯವರು ಬೇಷರತ್ತಾಗಿ ಒಪ್ಪುತ್ತಾರೆಯೇ?
  • ಹಾಗಿದ್ದರೆ, ಬಿಜೆಪಿ ಆಡಳಿತದಲ್ಲಿ ಮೂವರು ಸಿಎಂಗಳು ಏಕೆ ವರದಿಯ ಕುರಿತು ಕ್ರಮ ಕೈಗೊಳ್ಳಲಿಲ್ಲ?
  • ಅನ್ವರ್ ಮಾಣಿಪ್ಪಾಡಿ ಅವರ ಹೇಳಿಕೆ ಪ್ರಕಾರ
    @BYVijayendra
    ಅವರು ವರದಿಯನ್ನು ಮುಚ್ಚಿಹಾಕಲು ಅವರನ್ನು ಸಂಪರ್ಕಿಸಿದ್ದರಂತೆ, ವಿಜಯೇಂದ್ರರವರು ಯಾರ ಪರವಾಗಿ ಸಂಪರ್ಕಿಸಿದರು?
  • ⁠ಅನ್ವರ್ ಮಾಣಿಪ್ಪಾಡಿ ಅವರು ಮೋದಿ, ಷಾ ಮತ್ತು ನಡ್ಡಾ ಅವರಿಗೆ ಪತ್ರ ಬರೆದಿದ್ದರಂತೆ, ಹೀಗಿದ್ದರೂ ಮೋದಿ - ಶಾ ಜೋಡಿ ನಮ್ಮ ಕುಟುಂಬದ 4,00,000 ಕೋಟಿ ಹಗರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲಿಲ್ಲ ಏಕೆ?

ಕಳೆದ 10 ವರ್ಷದಿಂದಲೂ ಬಿಜೆಪಿ ಹಾಗೂ ಅದರ ಫೇಕ್ ಫ್ಯಾಕ್ಟರಿಯು ನಮ್ಮ ಕುಟುಂಬ 50,000 ಕೋಟಿ ಆಸ್ತಿ ಹೊಂದಿದೆ ಎನ್ನುತ್ತಿದ್ದಾರೆ, ಈಗ ಹೊಸದಾಗಿ ನಮ್ಮ ಕುಟುಂಬ ವಕ್ಫ್ ಆಸ್ತಿಯನ್ನೂ ಹೊಂದಿದೆ ಎನ್ನುತ್ತಿದ್ದಾರೆ,
ಬಿಜೆಪಿಯವರು ಒಂದೇ ಒಂದು ಸಾರಿ ಆ ನಮ್ಮ ಆಸ್ತಿ ಎಲ್ಲಿದೆ ಎಂದು ತೋರಿಸಿಬಿಡಲಿ. 50 ಸಾವಿರ ಕೋಟಿಯ ಆಸ್ತಿಗಾಗಿ ನಾನೂ ಕಾತುರನಾಗಿ ಕಾಯುತ್ತಿದ್ದೇನೆ!!

ನಮ್ಮ ವಿರುದ್ಧ ಬಿಜೆಪಿ ಆರೋಪಗಳ ಮೇಲೆ ಆರೋಪಗಳು ಮಾಡುತ್ತಿರುವುದು
⁃ಯಡಿಯೂರಪ್ಪನವರ ಪೊಕ್ಸೋ ಪ್ರಕರಣ ಮರೆಮಾಚಲು
⁃ವಿಜಯೇಂದ್ರರವರ ವಕ್ಫ್ ಲಂಚ ಪ್ರಕರಣವನ್ನು ಅಡಗಿಸಲು
⁃ವಿಜಯೇಂದ್ರರವರ ಅಕ್ರಮ ಹಣ ವರ್ಗಾವಣೆ ಹಗರಣವನ್ನು ಮರೆಸಲು
⁃AJP, VJP, YJP ಎಂಬ ಬಿಜೆಪಿಯ ಬಣಜಗಳದಿಂದ ಗಮನ ಬೇರೆಡೆ ಸೆಳೆಯಲು

ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳಲ್ಲಿ ಒಂದೇ ಒಂದನ್ನು ಸಾಬೀತು ಮಾಡಿ ತೋರಿಸಲಿ, ದಮ್ಮು ತಾಕತ್ತಿನ ಬಿಜೆಪಿಯವರಿಗೆ ಇದು ನನ್ನ ಸವಾಲು ಎಂದಿದ್ದಾರೆ.

Tags :