ಬೆಳಂಬೆಳಗ್ಗೆ ಲೋಕಾಯುಕ್ತ ದಾಳಿ
08:19 AM Jan 08, 2025 IST | Samyukta Karnataka
ನಗರಸಭೆ ಇಂಜಿನಿಯರ್ ಗೆ ಬೆಳಂಬೆಳಗ್ಗೆ ಲೋಕಾ ಶಾಕ್..!
ಗದಗ: ಗದಗ ಬೆಟಗೇರಿ ನಗರಸಭೆಯ
ಕಾರ್ಯನಿರ್ವಾಹಕ ಇಂಜಿನಿಯರ್ ಹುಚ್ಚೇಶ್ ಬಂಡಿವಡ್ಡರ್
ಮನೆ, ಕಚೇರಿ ಮೇಲೆ ದಾಳಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದ್ದಾರೆ.
ಬಂಡಿವಡ್ಡರಗೆ ಸೇರಿದ ಗಜೇಂದ್ರಗಡ, ಬಾಗಲಕೋಟೆ ಸೇರಿದಂತೆ ಐದು ಕಡೆ ದಾಳಿ ನಡೆದಿದೆ.
ಅಕ್ರಮ ಆಸ್ತಿಗಳಿಕೆ ಆರೋಪ ಹಿನ್ನೆಲೆ ಲೋಕಾಯುಕ್ತ ರೇಡ್ ಮಾಡಲಾಗಿದೆಯೆಂದು ತಿಳಿದುಬಂದಿದೆ.
ಬಂಡಿವಡ್ಡರ ಮನೆಯಲ್ಲಿ
ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ
ದಾಳಿಯ ನೇತ್ರತ್ವವನ್ನು
ಲೋಕಾಯುಕ್ತ ಎಸ್ ಪಿ ಹನಮಂತರಾಯ್, ಡಿವೈಎಸ್ ಪಿ ವಿಜಯ್ ಬಿರಾದಾರ್ ವಹಿಸಿಸಿದ್ದಾರೆ
ಇನ್ಸಪೆಕ್ಟರ್ ಪರಮೇಶ್ ಕವಟಗಿ ಸೇರಿದಂತೆ ಧಾರವಾಡ ಸಿಬ್ಬಂದಿಯಿಂದ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ
ಪಿಎಸ್ ಐ ಎಸ್ ಎಸ್ ತೇಲಿ ಸೇರಿದಂತೆ ಲೋಕಾಯುಕ್ತ ಸಿಬ್ಬಂದಿ ಭಾಗಿಯಾಗಿದೆಯೆಂದು ಮೂಲಗಳು ಸಂ ಕ ಕ್ಕೆ ತಿಳಿಸಿವೆ.