For the best experience, open
https://m.samyuktakarnataka.in
on your mobile browser.

ಭಾರತೀಯ ರೈಲ್ವೆ 150ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ನವರಾತ್ರಿ ವಿಶೇಷ ಥಾಲಿ ಊಟ ಪ್ರಾರಂಭ

10:00 PM Oct 08, 2024 IST | Samyukta Karnataka
ಭಾರತೀಯ ರೈಲ್ವೆ 150ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ನವರಾತ್ರಿ ವಿಶೇಷ ಥಾಲಿ ಊಟ ಪ್ರಾರಂಭ

ಹುಬ್ಬಳ್ಳಿ : ಭಾರತೀಯ ರೈಲ್ವೆ 150 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ನವರಾತ್ರಿ ವ್ರತ ವಿಶೇಷ ಥಾಲಿ ಊಟ ಪ್ರಾರಂಭಿಸಿದೆ ಎಂದು ನೈಋತ್ಯ ರೈಲ್ಚೆ ಪ್ರಕಟಣೆ ತಿಳಿಸಿದೆ.

ಇದು ನವರಾತ್ರಿ ಹಬ್ಬದ ಋತುವಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಆರಾಮ ಮತ್ತು ಅನುಕೂಲವನ್ನು ಒದಗಿಸುತ್ತದೆ. ಪ್ರಯಾಣಿಕರು ಈ ರುಚಿಕರವಾದ ನವರಾತ್ರಿ ವ್ರತ ವಿಶೇಷ ಥಾಲಿಯನ್ನು ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ಸೈಟ್ ಮೂಲಕ ಆನ್ ಲೈನ್ ಮೂಲಕ ಆರ್ಡರ್ ಮಾಡಬಹುದು ಎಂದು ತಿಳಿಸಿದೆ.

ಪ್ರಯಾಣಿಸುವಾಗ, ನವರಾತ್ರಿಯನ್ನು ಆಚರಿಸುವ ಪ್ರಯಾಣಿಕರು ಆಹಾರ ಮತ್ತು ಪಾನೀಯಗಳಿಗೆ ಸಂಬಂಧಿಸಿದಂತೆ ವಿವಿಧ ಸವಾಲುಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳನ್ನು ಪರಿಹರಿಸಲು, ಭಾರತೀಯ ರೈಲ್ವೆ ಮುಂಬೈ ಸೆಂಟ್ರಲ್, ದೆಹಲಿ ಜಂಕ್ಷನ್, ಸೂರತ್, ಜೈಪುರ, ಲಕ್ನೋ, ಪಾಟ್ನಾ ಜಂಕ್ಷನ್, ಲುಧಿಯಾನ, ದುರ್ಗ್, ಚೆನ್ನೈ ಸೆಂಟ್ರಲ್, ಸಿಕಂದರಾಬಾದ್, ಅಮರಾವತಿ, ಹೈದರಾಬಾದ್, ತಿರುಪತಿ, ಜಲಂಧರ್ ಸಿಟಿ, ಉದಯಪುರ ಸಿಟಿ, ಬೆಂಗಳೂರು ಕಂಟೋನ್ಮೆಂಟ್, ನವದೆಹಲಿ, ಥಾಣೆ, ಪುಣೆ, ಮಂಗಳೂರು ಸೆಂಟ್ರಲ್ ನಿಲ್ದಾಣ ಸೇರಿದಂತೆ 150 ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ನವರಾತ್ರಿ ವಿಶೇಷ ಥಾಲಿಯನ್ನು ಪರಿಚಯಿಸಿದೆ.

ನವರಾತ್ರಿಯ ಸಾರವನ್ನು ಗೌರವಿಸುವ ವ್ರತ ಥಾಲಿ ತಯಾರಿಕೆಯಲ್ಲಿ ಗುಣಮಟ್ಟ ಮತ್ತು ಪೌಷ್ಠಿಕಾಂಶವನ್ನು ಖಚಿತಪಡಿಸಿಕೊಳ್ಳಲು ವಿಶೇಷ ಕಾಳಜಿ ವಹಿಸಲಾಗಿದೆ. ಐಆರ್ ಸಿಟಿಸಿ ಅಪ್ಲಿಕೇಶನ್ನಲ್ಲಿ ತಮ್ಮ ಪಿಎನ್ಆರ್ ಸಂಖ್ಯೆಯನ್ನು ನಮೂದಿಸುವ ಮೂಲಕ ಅಥವಾ ಐಆರ್ ಸಿಟಿಸಿ ಇ-ಕ್ಯಾಟರಿಂಗ್ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಪ್ರಯಾಣಿಕರು ತಮ್ಮ ಥಾಲಿಯನ್ನು ಸುಲಭವಾಗಿ ಕಾಯ್ದಿರಿಸಬಹುದು. ಭಾರತೀಯ ರೈಲ್ವೆಯಲ್ಲಿ ಈ ನವರಾತ್ರಿಯಲ್ಲಿ ತಾಜಾ ಮತ್ತು ಶುದ್ಧ ಆಹಾರವನ್ನು ಸವಿಯಿರಿ ಎಂದು ಪ್ರಯಾಣಿಕರಿಗೆ ಮನವಿ ಮಾಡಿದೆ.