ಭೀಕರ ಅಪಘಾತ: ಮಂಡ್ಯ ಮೂಲದ ಬುಲೆರೋ ಚಾಲಕ ಸ್ಥಳದಲ್ಲೇ ಸಾವು
06:24 PM Dec 10, 2024 IST | Samyukta Karnataka
ಪಾವಗಡ : ಭೀಕರ ರಸ್ತೆ ಅಪಘಾತದಲ್ಲಿ ಬುಲೆರೋ ವಾಹನ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಾವಗಡ ಪಟ್ಟಣದ ತುಮಕೂರು ರಸ್ತೆಯ ಎಸ್ ಆರ್ ಎಸ್ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಮೃತ ವ್ಯಕ್ತಿಯನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಪುಟ್ಟಸ್ವಾಮಿ ಎನ್ನುವರ 21 ವರ್ಷದ ಗಿರೀಶ್ ಎಂದು ಗುರುತಿಸಲಾಗಿದೆ.
ತುಮಕೂರು ರಸ್ತೆಯಿಂದ ಪಾವಗಡದ ಕಡೆ ಬರುತ್ತಿದ್ದಂತಹ ಬುಲೆರೋ ಮುಂಭಾಗದಲ್ಲಿ ಹೋಗುತ್ತಿದ್ದ ಲಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ, ಲಾರಿಯ ಮುಂಭಾಗದಲ್ಲಿ ಓಮ್ನಿಯೊಂದು ತೆರಳುತ್ತಿದ್ದು ಇದ್ದಕ್ಕಿದ್ದಂತೆ ಓಮ್ನಿ ಯ್ಯೂಟರ್ನ್ ತೆಗೆದುಕೊಂಡಿದ್ದು, ಲಾರಿ ಚಾಲಕ ತನ್ನ ವೇಗವನ್ನು ಕಡಿಮೆ ಮಾಡಿದ್ದಾನೆ, ಹಿಂದೆಯಿಂದ ಬರುತ್ತಿದ್ದ ಬುಲೆರೋ ವಾಹನ ವೇಗವಾಗಿ ಬಂದು ಲಾರಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ, ಸ್ಥಳಕ್ಕೆ ಪಾವಗಡ ಪೊಲೀಸ್ ಠಾಣೆಯ ಪಿ ಎಸ್ ಐ ಗುರುನಾಥ ಭೇಟಿ ನೀಡಿ ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.