ಮಂಗಳೂರು: ಮಾರ್ಗ ಬದಲು
11:34 AM Dec 09, 2024 IST | Samyukta Karnataka
ಮಂಗಳೂರು: ಸುರತ್ಕಲ್ ಎಂಆರ್ಪಿಎಲ್ ರಸ್ತೆಯ ರೈಲ್ವೆ ಮೇಲ್ಸೇತುವೆ ಕಾಂಕ್ರಟೀಕರಣ ಕಾಮಗಾರಿಗಾಗಿ ವಾಹನ ಸಂಚಾರ ನಿಷೇಧಿಸಿ ,ಬದಲೀ ಮಾರ್ಗ ಉಪಯೋಗಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುರತ್ಕಲ್ ಆಸುಪಾಸಿನ ಜನರಿಗೆ ಸೂರಜ್ ಹೋಟೆಲ್ ಬಳಿಯ ಚೊಕ್ಕಬೆಟ್ಟು ರಸ್ತೆ ಹಾಗೂ ಮಂಗಳೂರು ಕಡೆಯಿಂದ ಬರುವವರಿಗೆ ಕುಳಾಯಿ ಕಾನಾ ರಸ್ತೆಯಾಗಿ ಚೊಕ್ಕಬೆಟ್ಟು ಹೋಗಲು ಬದಲಿ ಮಾರ್ಗ ಸೂಚಿಸಲಾಗಿದೆ.
ಜನತೆಯಲ್ಲಿ ಮನವಿ ಮಾಡಿದ ಡಾ.ಭರತ್ ಶೆಟ್ಟಿ ವೈ: ಕಾಂಕ್ರಟೀಕರಣ ಕಾಮಗಾರಿಗೆ ಮಂಗಳೂರು ಮಹಾನಗರ ಪಾಲಿಕೆಯ ನಿಧಿಯಿಂದ 78 ಲಕ್ಷ ರೂ.ಮಂಜೂರು ಮಾಡಲಾಗಿದೆ. ಕಾಮಗಾರಿ ಸಂದರ್ಭ ಒಂದೆರಡು ತಿಂಗಳು ಬದಲಿ ಮಾರ್ಗ ಉಪಯೋಗಿಸುವ ಅನಿವಾರ್ಯತೆಯಿದ್ದು ವಾಹನ ಸವಾರರು ಜನರು ಸಹಕರಿಸಬೇಕು. ಶಾಶ್ವತ ಕಾಮಗಾರಿ ಮಾಡುವ ನಿಟ್ಟಿನಲ್ಲಿ ಕಾಂಕ್ರಿಟ್ ಮಾರ್ಗ ಅಗತ್ಯವಾಗಿದೆ ಎಂದಿದ್ದಾರೆ.