ಮಹಿಳೆಯ ಮೆದುಳು ನಿಷ್ಕ್ರಿಯ: ಅಂಗಾಂಗ ದಾನ ಮಾಡಿ ಸಾರ್ಥಕತೆ
ಮಂಗಳೂರು: ಇತ್ತಿಚೆಗೆ ಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಯ ಮೆದುಳು ನಿಷ್ಕ್ರಿಯಗೊಂಡಿದ್ದು ಕುಟುಂಬಸ್ಥರಿಂದ ಮಹಿಳೆಯ ಅಂಗಾಂಗ ದಾನದ ಮೂಲಕ ಸಾರ್ಥಕತೆ ಮೆರೆದಿರುವುದು ಮಂಗಳೂರಿನಲ್ಲಿ ನಡೆದಿದೆ,
ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ನಾಲ್ಕು ದಿನಗಳ ಹಿಂದೆ ದಾಖಲಾಗಿದ್ದ ಶಿವಮೊಗ್ಗ ರಾಗಿಗುಡ್ಡ ನಿವಾಸಿಯಾದ ರೇಖಾ(41) ಎಂಬುವವರ ಮೆದುಳು ರಕ್ತಸ್ರಾವದಿಂದ ಬ್ರೈನ್ ಡೆಡ್ ಆಗಿದ್ದು, ರೇಖಾ ಕುಟುಂಬಸ್ಥರಿಂದ ಅಂಗಾಂಗ ದಾನದ ಮೂಲಕ ಸಾರ್ಥಕತೆ ಮೆರೆದಿದ್ದಾರೆ,
ಸರಕಾರಿ ವೆನ್ಲಾಕ್ ಆಸ್ಪತ್ರೆಯ ನೂತನ ಸರ್ಜಿಕಲ್ ಬ್ಲಾಕ್ ಮೂಲಕ ಅಂಗಾಂಗ ರವಾನೆ ಮಾಡಲಾಗುತ್ತಿದ್ದು, ಮೈಸೂರಿನ ಅಪೋಲೋ ಆಸ್ಪತ್ರೆಗೆ ರೇಖಾ ಅವರ ಯಕೃತ್ ರವನೆಗೆ ಸಿದ್ಧತೆ ನಡೆದಿದೆ, ರೇಖಾರ ಕಣ್ಣುಗಳ ಕಾರ್ನಿಯಾ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ನೀಡಲಾಗುತ್ತಿದ್ದು, ಅಂಗಾಂಗ ರವಾನೆಗೆ ವೆನ್ಲಾಕ್ ಆಸ್ಪತ್ರೆಯಿಂದ ಅಂಬುಲೆನ್ಸ್ ತೆರಳಲು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ, ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಂಡಿರುವ ಪೊಲೀಸರು, ವೆನ್ಲಾಕ್ ಆಸ್ಪತ್ರೆಯಿಂದ ಅಂಗಾಂಗ ರವಾನೆ ನಡೆಸಿದ್ದಾರೆ.