For the best experience, open
https://m.samyuktakarnataka.in
on your mobile browser.

ಮುಡಾ ಕಚೇರಿಯಲ್ಲಿ ಕಡತ ತಿದ್ದಿದ ಬ್ರೋಕರ್

08:58 PM Jan 09, 2025 IST | Samyukta Karnataka
ಮುಡಾ ಕಚೇರಿಯಲ್ಲಿ ಕಡತ ತಿದ್ದಿದ ಬ್ರೋಕರ್

ಮಂಗಳೂರು: ಮಂಗಳೂರಿನ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಕಚೇರಿಯಲ್ಲಿ ಬ್ರೋಕರೊಬ್ಬರು ಅಧಿಕಾರಿಯ ಕೊಠಡಿಗೆ ನುಗ್ಗಿ ಕಡತಗಳನ್ನು ಫೋರ್ಜರಿ ಮಾಡುತ್ತಿರುವ ಸಿಸಿ ಕ್ಯಾಮೆರಾದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ಜ. ೭ರಂದು ನಡೆದಿದೆ.
ಮುಡಾ ಕಚೇರಿಯಲ್ಲಿ ಬ್ರೋಕರ್ ಹಾವಳಿ ದಿನೇ ದಿನೇ ಹೆಚ್ಚುತ್ತಿರುವ ಬಗ್ಗೆ ನಾಗರಿಕರ ಆರೋಪಕ್ಕೆ ಈ ಘಟನೆ ಪುಷ್ಠಿ ನೀಡಿದೆ. ಬ್ರೋಕರ್ ಅಧಿಕಾರಿಯೊಬ್ಬರ ಕೊಠಡಿ ಪ್ರವೇಶಿಸುತ್ತಾನೆ, ಮೇಜಿನ ಮೇಲಿರುವ ಕಡತ ಪರಿಶೀಲಿಸಿ ಬಳಿಕ ಕಡತವನ್ನು ಪೆನ್‌ನಿಂದ ತಿದ್ದುತ್ತಿರುವ ದೃಶ್ಯ ಕಾಣುತ್ತದೆ. ಈ ವೇಳೆ ಕಚೇರಿಯಲ್ಲಿ ಯಾರೂ ಇರುವುದಿಲ್ಲ. ಬ್ರೋಕರ್‌ಗಳು, ಅಧಿಕಾರಿಗಳು ಕೊಠಡಿಯಲ್ಲಿ ಇಲ್ಲದ ವೇಳೆ ಪ್ರವೇಶಿಸಿ ತಮಗೆ ಬೇಕಾದಂತೆ ಕಡತಗಳ ತಿದ್ದುಪಡಿ ಅಥವಾ ಕಡತಗಳ ನಾಪತ್ತೆ ಮಾಡುತ್ತಿರುವ ಬಗ್ಗೆ ನಾಗರಿಕರಲ್ಲಿ ಶಂಕೆ ಮೂಡುವಂತೆ ಈ ಘಟನೆಯು ಮಾಡಿದೆ. ಮುಡಾ ಕಚೇರಿಯಲ್ಲಿ ನಾಗರಿಕರ ಕೆಲಸ ಮಾಡಲು ಸತಾಯಿಸಲಾಗುತ್ತಿದೆ ಎಂಬ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬರುತ್ತಿದೆ.