ಮುಡಾ ಹಗರಣದಲ್ಲಿ ಕಾನೂನು ಉಲ್ಲಂಘನೆ ಆಗಿರುವುದು ಸರ್ಕಾರವೇ ಒಪ್ಪಿಕೊಂಡಿದೆ
ಮಂಗಳೂರು: ಮುಡಾ ಹಗರಣದಲ್ಲಿ ಅಧಿಕಾರಿ ತಪ್ಪು ಮಾಡಿದ್ದಾರೆ ಎಂದು ಸರ್ಕಾರವೇ ಅವರನ್ನು ಅಮಾನತು ಮಾಡಿದೆ. ಕಾನೂನು ಉಲ್ಲಂಘನೆ ಆಗಿರುವುದನ್ನ ಸರ್ಕಾರವೇ ಸ್ಪಷ್ಟವಾಗಿ ಒಪ್ಪಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಮಂಗಳೂರಿನಲ್ಲಿ ಇಂದು ದಕ್ಷಿನ ಕನ್ನಡ-ಉಡುಪಿ ವಿಧಾನ ಪರಿಷತ್ ಸ್ಥಾನದ ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಆರೋಪದ ಪ್ರಕರಣ ಕೋರ್ಟ್‌ನಲ್ಲಿದೆ. ಅಲ್ಲಿ ಏನು ಆಗುತ್ತೆ, ಏನು ಆಗಲ್ಲ ಅನ್ನುವುದನ್ನು ಭವಿಷ್ಯ ನುಡಿಯುವುದು ಸರಿಯಲ್ಲ. ಕೋರ್ಟ್‌ನಲ್ಲಿ ತೀರ್ಮಾನ ಆಗುತ್ತದೆ. ಈ ಬಗ್ಗೆ ಪರ ವಿರೋಧ ವಾದ ನಡೆಯುತ್ತಿದೆ. ಈ ಪ್ರಕರಣದಲ್ಲಿ ಸರ್ಕಾರವೇ ತಮ್ಮ ಆಜ್ಞೆಯಲ್ಲಿ ಅಧಿಕಾರಿಯನ್ನು ಅಮಾನತು ಮಾಡಿದ್ದು, ಕಾನೂನು ಉಲ್ಲಂಘನೆ ಆಗಿದನ್ನು ಸ್ವಷ್ಟವಾಗಿ ಒಪ್ಪಿದ್ದಾರೆ. ಕೋರ್ಟನಲ್ಲಿ ಏನು ಅಂತಿಮ ತೀರ್ಪು ಬರುತ್ತದೆ ಎಂದು ನೋಡೋಣ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ಕುರಿತು ರಾಜ್ಯ ಸರ್ಕಾರ ತನಿಖೆಗೆ ಮುಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರದ ಅವಧಿಯ ಕೇಸ್‌ಗಳನ್ನು ತೆಗೆಯಲಿ, ಏನಿದ್ದರೂ ತೆಗೆಯಲಿ ಏನೇ ಇದ್ದರೂ ಎದುರಿಸಲು ಸಿದ್ಧ, ಕಾನೂನು ಇದೆ ಕೋರ್ಟ್ ಇದೆ. ಸೇಡಿನ ರಾಜಕೀಯ ಭಾವನೆಯಿಂದ ತೆಗೆದರೂ, ಎದುರಿಸಲು ಸಿದ್ಧ ಇದ್ದೇವೆ ಏನು ಬರುತ್ತದೆ ನೋಡೋಣ ಎಂದರು.