For the best experience, open
https://m.samyuktakarnataka.in
on your mobile browser.

ಮುನಿರತ್ನ ಬಂಧನದ ಹಿಂದೆ ಸಿಡಿ ಶಿವು

08:00 PM Sep 16, 2024 IST | Samyukta Karnataka
ಮುನಿರತ್ನ ಬಂಧನದ ಹಿಂದೆ ಸಿಡಿ ಶಿವು

ಅಥಣಿ: ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್ ಹಿಂದೆ ಸಿಡಿ ಶಿವು ಇದ್ದಾನೆ. ಅವನ ವಿರೋಧಿಗಳನ್ನು ಈ ರೀತಿ ಮುಗಿಸುವುದೇ ಅವನ ಕಾರ್ಯವಾಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕ ಮುನಿರತ್ನ ದಲಿತರು, ಒಕ್ಕಲಿಗರಿಗೆ ಬೈದಿರುವುದು ಇನ್ನೂ ದೃಢಪಟ್ಟಿಲ್ಲ. ಇದನ್ನು ಸಿಡಿ ಶಿವು ಮಾಡಿದ್ದಾನೆ, ಅವನ ವಿರೋಧಿಗಳನ್ನು ಎಲ್ಲರನ್ನೂ ಜೈಲಿಗೆ ಹಾಕುತ್ತಾನೆ, ನಾನು ಒಬ್ಬ ಗಟ್ಟಿ ಇದ್ದೇನೆ ಎಂದು ಹೊರಗಡೆ ಇದ್ದೇನೆ ಎಂದರು.
ಡಿಕೆಶಿ ಕಂಪನಿ ರಾಜ್ಯದಲ್ಲಿ ನನ್ನನ್ನು ಮೊದಲು ಬಲಿ ಪಡೆದರು. ನಂತರ ದೇವೇಗೌಡ ಕುಟುಂಬ ಬಲಿ ಪಡೆದರು. ತದನಂತರ ಮುನಿರತ್ನರನ್ನು ಬಲಿ ಪಡೆದುಕೊಂಡಿದ್ದಾರೆ. ಇದನ್ನೆಲ್ಲಾ ನೋಡಿದರೆ ಒಂದು ಫಿಲ್ಮ್ ನೋಡಿದ ರೀತಿ ಆಗುತ್ತದೆ. ಸಿಡಿ ಶಿವುನಿಂದ ಕಾಂಗ್ರೆಸ್ ನಾಯಕರು ಸಫರ್ ಆಗುತ್ತಾರೆ, ಇನ್ನು ಮುಂದೆ ಅನೇಕ ಸಿಡಿಗಳು ದೊಡ್ಡ ಪ್ರಮಾಣದಲ್ಲಿ ಬರುತ್ತವೆ. ಸಿಡಿ ಬಗ್ಗೆ ಸಿಬಿಐ ತನಿಖೆಗೆ ನೀಡಬೇಕಾಗಿದೆ. ದ್ವೇಷದ ರಾಜಕಾರಣದಿಂದ ಜಾತಿ ಜಾತಿ ನಡುವೆ ಬೆಂಕಿ ಹಚ್ಚುವ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ನಕಲಿ ಸಿಡಿ ತಡೆಗೆ ಸಿಬಿಐಗೆ ವಹಿಸಬೇಕೆಂದು ಪ್ರಧಾನಿ ಅವರಿಗೆ ಮಾಧ್ಯಮಗಳ ಮುಖಾಂತರ ರಮೇಶ್ ಜಾರಕಿಹೊಳಿ ಮನವಿ ಸಲ್ಲಿಸಿದರು.
ಮುನಿರತ್ನ ಬೈದಿರುವುದು ಇನ್ನೂ ಪ್ರೂ ಆಗಿಲ್ಲ. ಅವಾಗಲೇ ನಮ್ಮ ಬಿಜೆಪಿ ನಾಯಕರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಫ್‌ಎಸ್‌ಎಲ್ ವರದಿ ಬರುವವರಿಗೆ ನಮ್ಮವರು ಮಾತನಾಡಬಾರದು. ಈ ವಿಚಾರದಲ್ಲಿ ವಿಜಯಪುರ ಸಂಸದ ರಮೇಶ ಜಿಗಜಣಿಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದರು.