ಮೋದಿ ಅದಾನಿ ಏಕ್ ಹೈ…
12:49 PM Dec 05, 2024 IST | Samyukta Karnataka
ನವದೆಹಲಿ: 'ಮೋದಿ ಅದಾನಿ ಏಕ್ ಹೈ', 'ಅದಾನಿ ಸೇಫ್ ಹೈ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಸಂಸತ್ ಆವರಣದಲ್ಲಿ ಗೌತಮ್ ಅದಾನಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಅದಾನಿ ವಿರುದ್ಧ ಮೋದಿ ತನಿಖೆಗೆ ಆದೇಶಿಸಲು ಸಾಧ್ಯವಿಲ್ಲ. ಏಕೆಂದರೆ ಹಾಗೇ ಮಾಡಿದರೆ ಸ್ವತಃ ಅವರೇ ತನಿಖೆ ಎದುರಿಸಬೇಕಾಗುತ್ತದೆ. ಮೋದಿ-ಅದಾನಿ ಒಂದೇ ಆಗಿದ್ದಾರೆ. ಇಬ್ಬರಲ್ಲ ಒಂದೇ' ಎಂದು ಆರೋಪಿಸಿದರು.
ಜಾಕೆಟ್ ಧರಿಸಿ ಪ್ರತಿಭಟನೆ : 'ಮೋದಿ ಅದಾನಿ ಏಕ್ ಹೈ', 'ಅದಾನಿ ಸೇಫ್ ಹೈ' ಎಂದು ಬರೆದಿರುವ ಜಾಕೆಟ್ ಧರಿಸಿ ವಿನೂತನ ರೀತಿಯಲ್ಲಿ ವಿಪಕ್ಷಗಳ ಸದಸ್ಯರು ಪ್ರತಿಭಟಿಸಿದ್ದಾರೆ.