For the best experience, open
https://m.samyuktakarnataka.in
on your mobile browser.

ಯುವತಿ ಮೈ ಮೇಲೆ ಕೈಹಾಕಿದ ಅನ್ಯಮತೀಯ: ಬಂಧನ

04:04 PM Aug 31, 2024 IST | Samyukta Karnataka
ಯುವತಿ ಮೈ ಮೇಲೆ ಕೈಹಾಕಿದ ಅನ್ಯಮತೀಯ  ಬಂಧನ

ಮೂಡುಬಿದಿರೆ : ಪ್ರಾಂತ್ಯ ಗ್ರಾಮದ ಟೈಲರ್ ಅಂಗಡಿಯೊಂದಕ್ಕೆ ಹೋಗುತ್ತಿರುವಾಗ ತನ್ನ ಕ್ಲಾಸ್‌ಮೇಟ್ ಆಗಿದ್ದ ಅರ್ಷದ್ (೨೧) ತನ್ನನ್ನು ಅಡ್ಡಗಟ್ಟಿ `ನೀನು ನನ್ನನ್ನು ಏಕೆ ಪ್ರೀತಿಸುತ್ತಿಲ್ಲ' ಎಂದನಲ್ಲದೆ ತನ್ನ ಮೈ ಮೇಲೆ ಕೈ ಹಾಕಲು ಬಂದ ಎಂದು ಆಪಾದಿಸಿ ಕೋಟೆಬಾಗಿಲಿನ ಯುವತಿ (೧೯) ಮೂಡುಬಿದಿರೆ ಠಾಣೆಗೆ ದೂರು ಗುರುವಾರ ನೀಡಿದ್ದಾರೆ.

ಗುರುವಾರ ಸಂಜೆ ೪ ಗಂಟೆ ಸುಮಾರಿಗೆ ತಾನು ಟೈಲರ್ ಅಂಗಡಿಗೆ ಹೋಗುತ್ತಿದ್ದ ಸಂದರ್ಭ ಘಟನೆ ನಡೆದಿದ್ದು ಈ ತಕ್ಷಣ ತಾನು ಬೊಬ್ಬೆ ಹೊಡೆದಿದ್ದು ಆಗ ಟೈಲರ್ ಹೊರಬಂದಿದ್ದು ಆಗ ಆರೋಪಿಯು ಸ್ಥಳದಿಂದ ಓಡಿಹೋದನೆಂದೂ ದೂರಿನಲ್ಲಿ ತಿಳಿಸಲಾಗಿದೆ.
ಯುವತಿಯನ್ನು ಅಡ್ಡಗಟ್ಟಿ ಕಿರುಕುಳ ನೀಡಿದ ಪ್ರಕರಣದನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಜರಗಿಸಿದ್ದಾರೆ. ಮೂಲತ: ಇರುವೈಲಿನವನಾದ ಅರ್ಷದ್ ಮೂಡುಬಿದಿರೆ ಕೊಡಂಗಲ್ಲು ಪಿಲಿಪಂಜರ ಎಂಬಲ್ಲಿದ್ದು ಬಳಿಕ ಯುವತಿಯ ಊರಾದ ಕೋಟೆಬಾಗಿಲಿನಲ್ಲಿ ಬಾಡಿಗೆ ಮನೆಯಲ್ಲಿರುವುದಾಗಿ ತಿಳಿದುಬಂದಿದೆ. ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯು ಕೆಲ ಸಮಯದ ಹಿಂದೆ ಕೆಲಸ ಬಿಟ್ಟು ಮನೆಯಲ್ಲೇ ಇದ್ದು ಗುರುವಾರ ಬಟ್ಟೆ ಹೊಲಿಸಲೆಂದು ತನ್ನ ಪರಿಚಿತ ಟೈಲರ್ ಅಂಗಡಿಗೆ ಹೋಗುವಾಗ ಈ ಘಟನೆ ಸಂಭವಿಸಿದೆ.

ಲವ್ ಜೆಹಾದ್ - ಕ್ರಮಕ್ಕಾಗಿ ವಿಹಿಂಪ ಆಗ್ರಹ: ಹಿಂದೂ ಯುವತಿಯರನ್ನು ಗುರಿಯಾಗಿಸಿ ಪ್ರೀತಿ ಪ್ರೇಮ ಎಂಬ ನಾಟಕವಾಡಿ ಮೋಸಮಾಡಿ ಅವರನ್ನು ಮತಾಂತರ ಮಾಡುವ ಒಂದು ವ್ಯವಸ್ಥಿತ ಗುಂಪು ಇದೆ ಇದರ ಬಗ್ಗೆ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ವಿಶ್ವಹಿಂದೂಪರಿಷತ್‌ಪ್ರಮುಖ ಶರಣ್ ಕುಮಾರ್ ಪಂಪ್‌ವೆಲ್ ತಿಳಿಸಿದ್ದಾರೆ.