ಯುವ ರೆಡ್ ಕ್ರಾಸ್ ಕಾರ್ಯಗಾರ ರಾಯರಡ್ಡಿ ಉದ್ಘಾಟನೆ
12:55 PM Aug 30, 2024 IST | Samyukta Karnataka
ಕೊಪ್ಪಳ: ನಗರದ ಮಹಾವೀರ ಸಮುದಾಯ ಭವನದಲ್ಲಿ ಶುಕ್ರವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಮತ್ತು ಬೆಂಗಳೂರು ರಾಜ್ಯ ಶಾಖೆಯ ಆಶ್ರಯದಲ್ಲಿ ಆ. ೩೦ರಿಂದ ಸೆ. ೧ರ ವರೆಗೆ ಕಲಬುರಗಿ ವಿಭಾಗೀಯ ಮಟ್ಟದ 'ಯುವ ರೆಡ್ ಕ್ರಾಸ್' ಕಾರ್ಯಗಾರವನ್ನು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಉದ್ಘಾಟಿಸಿದರು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಮಾತನಾಡಿದರು.
ಶಾಖೆಯ ಸಭಾಪತಿ ಸೋಮರಡ್ಡಿ ಅಳವಂಡಿ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಜಿಲ್ಲಾಧಿಕಾರಿ ನಲಿನ್ ಅತುಲ್, ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ನಾಗರಾಜ್ ಜುಮ್ಮಣ್ಣನವರ, ಡಿವೈಎಸ್ ಪಿ ಮುತ್ತಣ್ಣ ಸವರಗೋಳ, ಉಪಸಭಾಪತಿ ಡಾ.ಗವಿಸಿದ್ಧನಗೌಡ ಜಿ.ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಶ್ರೀನಿವಾಸ ಹ್ಯಾಟಿ, ರಾಜ್ಯ ಶಾಖೆಯ ಸದಸ್ಯ ಡಾ.ಚಂದ್ರಶೇಖರ್, ರಾಜೇಶ ಯಾವಗಲ್ ಇದ್ದರು