For the best experience, open
https://m.samyuktakarnataka.in
on your mobile browser.

ರಾಜ್ಯದಲ್ಲಿ ಬಾಣಂತಿಯರ ಸಾವು ಕಳವಳಕಾರಿ

07:29 PM Dec 08, 2024 IST | Samyukta Karnataka
ರಾಜ್ಯದಲ್ಲಿ ಬಾಣಂತಿಯರ ಸಾವು ಕಳವಳಕಾರಿ

ಕಾವೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವಿನಿಂದ ಆರೋಗ್ಯ ಸಂಬಂಧ ರಾಜ್ಯದ ಜನತೆಯಲ್ಲಿ ಸರಕಾರಿ ಆಸ್ಪತ್ರೆಯೆಂದರೆ ಭಯ ಆರಂಭವಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಸಾವಿನ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ.ಬಾಣಂತಿಯರಿಗೆ ನೀಡಿದ ಮದ್ದು ಕಳಪೆಯಾಗಿದ್ದು ಆರೋಗ್ಯ ಇಲಾಖೆ ಖರೀದಿಯಲ್ಲೂ ಯಾಕೆ ಎಚ್ಚರ ವಹಿಸಿಲ್ಲ. ಸರಕಾರ ಸಂತ್ರಸ್ಥ ಕುಟುಂಬಕ್ಕೆ ಪರಿಹಾರ ನೀಡಿದ ಮಾತ್ರಕ್ಕೆ ಸಮಸ್ಯೆ ಬಗೆ ಹರಿಯಲಾರದು. ಭವಿಷ್ಯದಲ್ಲಿ ಇಂತಹ ಘಟನೆ ನಡೆಯದಂತೆ ಔಷಧಿ ಖರೀದಿಯಲ್ಲಿ ಸೂಕ್ತ ಕ್ರಮ ವಹಿಸಬೇಕು ಶಾಸಕರಾದ ಡಾ.ಭರತ್ವಶೆಟ್ಟಿ ವೈ ಒತ್ತಾಯಿಸಿದ್ದಾರೆ.
ಇಎಸ್‌ಐ ವಿಮಾ ವಿಚಾರದಲ್ಲೂ ರಾಜ್ಯದಲ್ಲಿ ಆಸ್ಪತ್ರೆಗಳ ನವೀಕರಣ ಕುರಿತಂತೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಲಕ್ಷಾಂತರ ಬಡ ರೋಗಿಗಳು ದುಬಾರಿ ಹಣ ತೆತ್ತು ಚಿಕಿತ್ಸೆ ಮಾಡಿಕೊಳ್ಳುವಂತಾಗಿದೆ.‌ ಕೇಂದ್ರದ ಸೌಲಭ್ಯವನ್ನು ಜನರಿಗೆ ಮುಟ್ಟಿಸುವಲ್ಲಿ ರಾಜ್ಯ ಸರಕಾರ ಎಡವುತ್ತಿದೆ ಎಂದು ಟೀಕಿಸಿದ್ದಾರೆ.