ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದ ಸಾಗರ ಖಂಡ್ರೆ
07:49 PM Dec 20, 2024 IST | Samyukta Karnataka
ನವದೆಹಲಿ: ಕ್ಷೇತ್ರದ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೀದರ್ ಲೋಕಸಭಾ ಕ್ಷೇತ್ರದ ಯುವ ಸಂಸದ ಸಾಗರ್ ಖಂಡ್ರೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿದ್ದಾರೆ.
ಭೇಟಿಯ ವೇಳೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಭಿವೃದ್ದಿ ವಿಷಯಗಳ ಕುರಿತು ಚರ್ಚಿಸಿ, ಕೆಲ ಪ್ರಮುಖ ಬೇಡಿಕೆಗಳನ್ನು ಸಚಿವರ ಮುಂದೆ ಇಟ್ಟಿದ್ದಾರೆ.
ಕ್ಷೇತ್ರದ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಮನವಿ ಮಾಡಿದ ಪ್ರಮುಖ ಬೇಡಿಕೆಗಳು
- ಯಶವಂತಪುರ-ಬೀದರ-ಯಶವಂತಪುರ ಎಕ್ಸ್‌ಪ್ರೆಸ್ (ಟ್ರೇನ್ ನಂ. 16578/77): ಪ್ರಸ್ತುತ ಸ್ಥಗಿತಗೊಂಡಿರುವ ಈ ರೈಲು ಸೇವೆಯನ್ನು ಪುನಃ ಆರಂಭಿಸಿ, ಅದನ್ನು ದೈನಂದಿನ ಸೇವೆಯಾಗಿ ಪರಿವರ್ತಿಸಲು ಒತ್ತಾಯಿಸಿದೆನು. ಇದರಿಂದ ಬೀದರ ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿನ ನಡುವಿನ ಸಂಪರ್ಕ ಸುಧಾರಣೆ ಆಗುತ್ತದೆ.
- ವಂದೇ ಭಾರತ್ ರೈಲು: ಬೀದರ ಮತ್ತು ಬೆಂಗಳೂರಿನ ನಡುವೆ ವಂದೇ ಭಾರತ್ ರೈಲು ಪ್ರಾರಂಭಿಸಲು ಮನವಿ ಮಾಡಿದೆನು, ಇದರಿಂದ ಪ್ರಯಾಣ ಸಮಯ ಕಡಿಮೆಯಾಗಿ, ಜನರ ಅನುಕೂಲತೆ ಹೆಚ್ಚುತ್ತದೆ.
- ತಾಂಡೂರು-ಜಹೀರಾಬಾದ್ ಹೊಸ ರೈಲು ಮಾರ್ಗ: 2023ರಲ್ಲಿ ಅನುಮೋದನೆ ಪಡೆದ ಈ ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಯನ್ನು ನಮ್ಮ ಬೀದರ ಲೋಕಸಭಾ ಕ್ಷೇತ್ರದ ಚಿಂಚೋಳಿ ತಾಲೂಕು ಮೂಲಕ ಮರುಸಮೀಕ್ಷೆ ಮಾಡುವಂತೆ ವಿನಂತಿಸಿದೆನು, ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ ಈ ಭಾಗದ ಅಭಿವೃದ್ಧಿಗೆ ನೆರವಾಗುತ್ತದೆ.
- ಸಿಎಸ್ಎಂಟಿ-ಬೀದರ ಎಕ್ಸ್‌ಪ್ರೆಸ್ (ಟ್ರೇನ್ ನಂ. 22143/44): ವಾರದಲ್ಲಿ ಮೂರು ದಿನ ಮಾತ್ರ ಲಭ್ಯವಿರುವ ಈ ರೈಲು ಸೇವೆಯನ್ನು ದೈನಂದಿನ ಸೇವೆಯಾಗಿ ಪರಿವರ್ತನೆ ಮಾಡುವಂತೆ ಕೋರಿದೆನು, ಇದರಿಂದ ಬೀದರ, ಪುಣೆ, ಮತ್ತು ಮುಂಬೈನ ನಡುವಿನ ವ್ಯಾಪಾರ ಮತ್ತು ಉದ್ಯೋಗಾವಕಾಶಗಳು ಸುಧಾರಿಸುತ್ತವೆ.
- ಬೀದರ-ದಿಲ್ಲಿ ನೇರ ರೈಲು ಸಂಪರ್ಕ: ದಕ್ಷಿಣ ಎಕ್ಸ್‌ಪ್ರೆಸ್ (ಟ್ರೇನ್ ನಂ. 12721/22) ಅನ್ನು ಬೀದರವರೆಗೆ ವಿಸ್ತರಿಸಲು ಮನವಿ ಮಾಡಿದೆನು, ಇದರಿಂದ ಬೀದರ ಜನತೆಗೆ ದೇಶದ ರಾಜಧಾನಿಯೊಂದಿಗೆ ನೇರ ಸಂಪರ್ಕ ಸಾಧಿಸಲು ಅನುಕೂಲವಾಗುತ್ತದೆ.
- ಬೀದರ-ಪಂಡರಪೂರ್ ರೈಲು: ಪಂಡರಪೂರ್ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಬೀದರ ಮತ್ತು ಪಂಡರಪೂರ್ ನಡುವಿನ ನೇರ ರೈಲು ಸೇವೆ ಪ್ರಾರಂಭಿಸಲು ಒತ್ತಾಯ.
- ಬೀದರ-ನಾಂದೇಡ್ ಹೊಸ ರೈಲು ಮಾರ್ಗ (157 ಕಿ.ಮೀ): 2018-19ರ ಬಜೆಟ್‌ನಲ್ಲಿ ಅನುಮೋದನೆಗೊಂಡ ಈ ಹೊಸ ಮಾರ್ಗವನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರುವಂತೆ ಒತ್ತಾಯಿಸಿದ್ದಾರೆ.