For the best experience, open
https://m.samyuktakarnataka.in
on your mobile browser.

ಲಾಠಿಜಾರ್ಜ್‌: ಕುಷ್ಟಗಿ ತಾಲೂಕಿನ ಮೇಟಿಗೆ ಗಂಭೀರ ಗಾಯ

07:50 PM Dec 10, 2024 IST | Samyukta Karnataka
ಲಾಠಿಜಾರ್ಜ್‌  ಕುಷ್ಟಗಿ ತಾಲೂಕಿನ ಮೇಟಿಗೆ ಗಂಭೀರ ಗಾಯ

ಕುಷ್ಟಗಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಟಿ ಜಾರ್ಜ್ ಮಾಡಿದ್ದಾರೆ. ಈ ಲಾಠಿ ಪ್ರಹಾರದಲ್ಲಿ ಕುಷ್ಟಗಿ ತಾಲೂಕಿನ ತಳವಗೇರಾ ಗ್ರಾಮದ ಹೂವಿನ ವ್ಯಾಪಾರಿ ಶಂಕರಪ್ಪ ಮೇಟಿ ತಲೆಗೆ ಗಂಭೀರ ಗಾಯವಾಗಿದೆ.
ಗಾಯಗೊಂಡ ಶಂಕರಪ್ಪ ಮೇಟಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ವೇಳೆ ಹತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ ಎಂದು ಕಡೇಕೊಪ್ಪ ಗ್ರಾಮದ ಪ್ರತ್ಯಕ್ಷದರ್ಶಿ ನಿಂಗಪ್ಪ ಜಿಗೇರಿ ತಿಳಿಸಿದ್ದಾರೆ.