For the best experience, open
https://m.samyuktakarnataka.in
on your mobile browser.

ಲಿವರ್ ಡೋನರ್ ಅರ್ಚನಾ ಕಾಮತ್ ನಿಧನ

08:33 PM Sep 16, 2024 IST | Samyukta Karnataka
ಲಿವರ್ ಡೋನರ್ ಅರ್ಚನಾ ಕಾಮತ್ ನಿಧನ

ಮಂಗಳೂರು: ಅಂಗದಾನ ಪ್ರಕ್ರಿಯೆ ಸಂದರ್ಭ ಆರೋಗ್ಯದಲ್ಲಿ ಏರಿಳಿತವಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಮಂಗಳೂರಿನ ಕರಂಗಲ್ಪಾಡಿಯಲ್ಲಿ ನಡೆದಿದೆ.
ಮಂಗಳೂರಿನ ಪ್ರಸಿದ್ಧ ಲೆಕ್ಕಪರಿಶೋಧಕ ಚೇತನ್ ಕಾಮತ್ ಅವರ ಪತ್ನಿ, ವೃತ್ತಿಯಲ್ಲಿ ಉಪನ್ಯಾಸಕಿಯಾದ ಅರ್ಚನಾ ಕಾಮತ್(೩೩) ಮೃತ ದುರ್ದೈವಿ.
ಲೆಕ್ಕಪರಿಶೋಧಕ ಚೇತನ್ ಕಾಮತ್ ಅವರ ತಂದೆ ಸಿ.ಎ ಸತೀಶ್ ಕಾಮತ್ ಅವರ ಸಹೋದರನ ಪತ್ನಿಗೆ ಲಿವರ್ ಡಿಸೀಸ್ ಇದ್ದ ಕಾರಣ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಲಿವರ್ ಕಸಿ ಮೂಲಕ ಚಿಕಿತ್ಸೆ ನೀಡಲು ನಿರ್ಧರಿಸಲಾಗಿತ್ತು. ಹಲವಾರು ಡೋನರ್‌ಗಳ ಲಿವರ್ ಮ್ಯಾಚ್ ಆಗದ ಕಾರಣ ಚಿಕಿತ್ಸೆಗೆ ಹಿನ್ನಡೆಯಾಗುತ್ತಿತ್ತು.
ಈ ವೇಳೆ ಅರ್ಚನಾ ಕಾಮತ್ ಅವರ ಲಿವರ್ ಅರ್ಗನ್ ಮ್ಯಾಚ್ ಆಗಿದ್ದ ಕಾರಣ ಅರ್ಚನಾ ಸಹಿತ ಕುಟುಂಬಸ್ಥರು ಲಿವರ್ ಡೊನೆಷನ್‌ಗೆ ನಿರ್ಧರಿಸಿದ್ದರು. ಚಿಕಿತ್ಸಾಪೂರ್ವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ೧೨ ದಿನದ ಮೊದಲು ಲಿವರ್ ಟ್ರಾನ್ಸಫಾರ್ ಮಾಡಲಾಗಿತ್ತು. ಲಿವರ್ ಡೋನರ್ ಅರ್ಚನಾ ಕಾಮತ್ ಆರೋಗ್ಯದಿಂದಿದ್ದು, ೩ ದಿನಗಳ ಹಿಂದೆ ಅಪೋಲೊ ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು.
ಈ ಮಧ್ಯೆ ಅರ್ಚನಾ ಕಾಮತ್ ಅವರ ಆರೋಗ್ಯದಲ್ಲಿ ಏರಿಳಿತವಾಗಿದ್ದರಿಂದ ಮತ್ತೆ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆದರೆ ಬಹು ಅಂಗಾಗ ವೈಫಲ್ಯಗೊಂಡು ಮೃತಪಟ್ಟಿರುವುದಾಗಿ ಭಾನುವಾರ ಆಸ್ಪತ್ರೆ ಮೂಲಗಳು ತಿಳಿಸಿದೆ.

Tags :