ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿರುವುದು ರಾಷ್ಟ್ರನಾಯಕರಿಂದ
ದಾವಣಗೆರೆ: ಬಿ.ವೈ ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನು ಮಾಡಿರುವುದು ರಾಷ್ಟçದ ನಾಯಕರು. ಹೊರತು, ಹಾದಿ ಬೀದಿಯಲ್ಲಿ ಹೋಗುವವರಲ್ಲ ಎಂದು ರಾಜ್ಯಾಧ್ಯಕ್ಷರ ಕೆಳಗಿಳಿಸಲು ಹೊರಟಿರುವ ಸ್ವಪಕ್ಷದ ವಿರೋಧಿ ಬಣಕ್ಕೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೂಚ್ಯವಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ, ಜೆ.ಪಿ. ನಡ್ಡಾ, ಅಮೀತ್ ಶಾ ಅವರಂಥ ನಾಯಕರು ವಿಜಯೇಂದ್ರದ ಕಾರ್ಯಕ್ಷಮತೆ, ಸಂಘಟನಾತ್ಮಕ ಶಕ್ತಿ ನೋಡಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ಹೊರತು ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿದ್ದು ಯಡಿಯೂರಪ್ಪನವರಲ್ಲ ಎಂದರು.
ನಾವು ಪಕ್ಷದ ಕಟ್ಟಾಳುಗಳು, ನಿಷ್ಠಾವಂತ ಕಾರ್ಯಕರ್ತರು. ಪಕ್ಷ ವಿರೋಧಿ ಚಟುವಟಿಕೆ ನಡೆಸುವವರನ್ನು ವರಿಷ್ಠರು ಗಮನಿಸುತ್ತಿರುತ್ತಾರೆ ಎಂದು ಯತ್ನಾಳ್ ಬಣಕ್ಕೆ ಪರೋಕ್ಷವಾಗಿ ಸಂದೇಶ ರವಾನಿಸಿದರು.
ದಾವಣಗೆರೆಯ ಹಿಂದೂ ಕಾರ್ಯಕರ್ತ ಸತೀಶ್ ಪೂಜಾರಿ ಅವರನ್ನು ಬಂಧಿಸಿ, ಅವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿರುವುದು ಹಾಗೂ ಅವರ ಬಗ್ಗೆ ವಂಶವೃಕ್ಷ ಕೆಳಿರುವುದು ಖಂಡನೀಯ. ಇದು ಖಾಕಿ ಸಾಮ್ರಾಜ್ಯವಲ್ಲ. ಪ್ರಜಾಪ್ರಭುತ್ವ ಎಂದರು.