ವಿಜೃಂಭಣೆಯಿಂದ ನೆರವೇರಿದ ಉಳವಿ ಜಾತ್ರೆ
ಜೋಯಿಡಾ: ತಾಲೂಕಿನ ಪ್ರಸಿದ್ಧ ದೈವಿ ಕ್ಷೇತ್ರವಾದ ಉಳವಿ ಶ್ರೀ ಚೆನ್ನಬಸವೇಶ್ವರರ ಮಹಾರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಅಡಿಕೇಶ್ವರ.. ಮಡಿಕೇಶ್ವರ.. ಉಳವಿ ಚನ್ನಬಸವೇಶ್ವರ.. ಉಳವಿ ಚೆನ್ನಬಸವೇಶ್ವರ ಬಹುಪರಾಕ್… ಶ್ರೀ ಚೆನ್ನಬಸವೇಶ್ವರ ಮಹಾರಾಜ ಕೀ ಜೈ ಎನ್ನುವ ಜೈಕಾರ, ಉದ್ಘೋಷದ ಜೊತೆ ಲಕ್ಷಾಂತರ ಭಕ್ತ ಸಾಗರದ ನಡುವೆ ಉಳವಿ ಚೆನ್ನಬಸವೇಶ್ವರ ಮಹಾರಥವನ್ನು ಭಕ್ತಾದಿಗಳು ಎಳೆದು ಪುನೀರತಾದರು.
ಶನಿವಾರ ಸಂಜೆ ೪.೦೦ ಗಂಟೆಗೆ ಉಳವಿ ಟ್ರಸ್ಟ್ ಅಧ್ಯಕ್ಷ ಗಂಗಾಧರ ಕಿತ್ತೂರ ರಥಕ್ಕೆ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ರಥವನ್ನು ದೇವಸ್ಥಾನದ ರಥಬೀದಿಯಿಂದ ಸುಮಾರು ೬೦೦ ಮೀಟರ್ ದೂರದ ಎತ್ತುಕಾಯುವ ಬಸವಣ್ಣನವರ ದೇವಸ್ಥಾನದ ವರೆಗೆ ಈ ಸಂದರ್ಭದಲ್ಲಿ ಎಂ.ಎಲ್.ಸಿ. ಗಣಪತಿ ಉಳ್ವೇಕರ ಸೇರಿದಂತೆ ಉಳವಿ ಟ್ರಸ್ಟ್ ಕಮಿಟಿ ಸದಸ್ಯರು, ತಾಲೂಕು ಆಡಳಿತದ ಅಧಿಕಾರಿಗಳು ಪಾಲ್ಗೊಂಡಿದ್ದರು.
ರಥೋತ್ಸವಕ್ಕೆ ನೆರೆದ ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಹಾಗೂ ತಾವು ಬೆಳೆದ ಧಾನ್ಯಗಳನ್ನು ಎಸೆದು ಹರಕೆ ತೀರಿಸಿದರು. ರಥೋತ್ಸವದ ಸಮಯದಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಉಳವಿಯಿಂದ ೨ ಕಿ.ಮೀ. ದೂರದ ವರೆಗೂ ವಾಹನದ ದಟ್ಟಣೆ ಏರ್ಪಟ್ಟಿತ್ತು.