For the best experience, open
https://m.samyuktakarnataka.in
on your mobile browser.

ವಿದ್ಯುತ್ ಶಾಕ್: ಕಾರ್ಮಿಕನ ಸಾವು

07:37 PM Jan 06, 2025 IST | Samyukta Karnataka
ವಿದ್ಯುತ್ ಶಾಕ್  ಕಾರ್ಮಿಕನ ಸಾವು

ಬಂಟ್ವಾಳ: ಪಾಂಡವರಕಲ್ಲು ಮಸೀದಿಯಲ್ಲಿ ಕಾಂಕ್ರಿಟ್ ಕೆಲಸ ಮುಗಿಸಿ ವಿದ್ಯುತ್ತಿನ ಸ್ವಿಚ್ ಆಫ್ ಮಾಡಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ಸಂಭವಿಸಿದೆ. ಪಾಂಡವರಕಲ್ಲು ನಿವಾಸಿ ಇಬ್ರಾಹಿಂ ( 44) ಮೃತಪಟ್ಟವರೆಂದು ಗುರುತಿಸಲಾಗಿದೆ.
ಪಾಂಡವರಕಲ್ಲು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಮದರಸ ಕಟ್ಟಡದ ಸೆಂಟ್ರಿಂಗ್ ಕೆಲಸ ರಾತ್ರಿ ಸುಮಾರು 10.30 ಗಂಟೆಯವರೆಗೂ ನಡೆದಿದ್ದು,ಬಳಿಕ ಇಬ್ರಾಹಿಂ ರವರು ವಿದ್ಯುತ್ತಿನ ಸ್ವಿಚ್ ಆಫ್ ಮಾಡಲು ಹೋದಾಗ ಅವರಿಗೆ ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿದೆ.
ಪರಿಣಾಮ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅವರನ್ನು ತಕ್ಷಣ ಪುಂಜಾಲಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮಚಿಕಿತ್ಸೆ ನೀಡಿನಂತರ ಹೆಚ್ಚಿನ ಚಿಕಿತ್ಸೆಗಾಗಿ‌ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆ ತರಲಾಗಿದ್ದು,ಇಲ್ಲಿ ಇವರನ್ನು ಪರೀಕ್ಷಿಸಿದ ವೈದ್ಯರು ಇಬ್ರಾಹಿಂ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ‌ಕೇಸು ದಾಖಲಾಗಿದೆ.

Tags :