ವೇವ್ಸ್ ಒಟಿಟಿ: ಒಂದು ತಿಂಗಳಲ್ಲಿ 1 ಮಿಲಿಯನ್ ಡೌನ್‌ಲೋಡ್
11:20 AM Dec 27, 2024 IST | Samyukta Karnataka
ಮನರಂಜನೆಯ ಹೊಸ ಅಲೆ: " ವೇವ್ಸ್ ಓಟಿಟಿ ಒಂದು ತಿಂಗಳಲ್ಲಿ 1 ಮಿಲಿಯನ್+ ಡೌನ್‌ಲೋಡ್
ಬೆಂಗಳೂರು: ಪ್ರಸಾರ್ ಭಾರತಿ ಸಂಸ್ಥೆಯ ವೇವ್ಸ್ ಒಟಿಟಿ ಪ್ಲಾಟ್ಫಾರ್ಮ್ ಬಿಡುಗಡೆಯಾದ ಒಂದು ತಿಂಗಳಲ್ಲಿ 1 ಮಿಲಿಯನ್+ ಡೌನ್‌ಲೋಡ್‌ಗಳನ್ನು ದಾಟಿದೆ.
65 ಲೈವ್ ಚಾನಲ್ಗಳು, ವಿಒಡಿ ಸರ್ವಿಸ್, ಗೇಮಿಂಗ್ ಇವೆಲ್ಲವೂ ಫ್ರೀಯಾಗಿ ಲಭಿಸಲಿವೆ. ಆನ್ಲೈನ್ ಶಾಪಿಂಗ್ ಸರ್ವಿಸ್ ಕೂಡ ಇದರಲ್ಲಿ ಒಳಗೊಳ್ಳಲಾಗುತ್ತದೆ. ಇದು ಒಎನ್ಡಿಸಿ ಸೌಲಭ್ಯವನ್ನು ಒದಗಿಸುತ್ತದೆ. ಕನ್ನಡವೂ ಸೇರಿದಂತೆ 12 ಭಾರತೀಯ ಭಾಷೆಗಳಲ್ಲಿ ಇದರ ಕಂಟೆಂಟ್ ಲಭ್ಯ ಇದೆ. ವೇವ್ಸ್ ಒಟಿಟಿಯು ಆ್ಯಪಲ್ ಮತ್ತು ಆಂಡ್ರಾಯ್ಡ್ ವರ್ಷನ್ಗಳಲ್ಲಿ ಲಭ್ಯ. ಆ್ಯಪಲ್ನ ಆ್ಯಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋನಲ್ಲಿ ಈ ಆ್ಯಪ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.