ಶಾರ್ಟ್ ಸರ್ಕ್ಯೂಟ್: 78 ಕುರಿಗಳ ಸಜೀವ ದಹನ
06:54 PM Aug 14, 2024 IST | Samyukta Karnataka
ಮುಂಡಗೋಡ: ಕುರಿ ಸಾಕಾಣಿಕೆ ಘಟಕದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ 78 ಕುರಿಗಳು ಸಜೀವ ದಹನಗೊಂಡ ಘಟನೆ ನಡೆದಿದೆ.
ಪಟ್ಟಣದ ಹೊರವಲಯದ ಕಲಘಟಗಿ ರಸ್ತೆಯಲ್ಲಿರುವ ನಜೀರ ಅಹ್ಮದ ದರ್ಗಾವಾಲೆ ಎಂಬುವವರಿಗೆ ಸೇರಿದ ತೋಟದಲ್ಲಿ ಈ ಘಟನೆ ನಡೆದಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಆವರಿಸಿ 78 ಕುರಿಗಳು ಆಹುತಿಯಾಗಿವೆ,
ಕೇವಲ ಒಂದು ಕುರಿ ಮಾತ್ರ ಅವಘಡದಿಂದ ಬದುಕುಳಿದಿದೆ. ಅಗ್ನಿಶಾಮಕದಳವರು ಬೆಂಕಿ ನಿಯಂತ್ರಿಸಿದ್ದಾರೆ ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪಶುವೈದ್ಯರು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.