ಶಿರೂರು ಗುಡ್ಡಕುಸಿತ ಪ್ರಕರಣ: ಪುಟಾಣಿ ಆವಂತಿಕಾ ಮೃತದೇಹ ಪತ್ತೆ
11:35 AM Jul 18, 2024 IST | Samyukta Karnataka
ಕಾರವಾರ: ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡ್ಡ ಕುಸಿದು 20ಕ್ಕೂ ಹೆಚ್ಚು ಜನರು ಮೃತ ಆಗಿರುವ ಬಗ್ಗೆ ಶಂಕೆ ವ್ಯಕ್ತ ಆಗುವುದರ ಜೊತೆಗೆ ಇನ್ನಷ್ಟು ಗುಡ್ಡ ಕುಸಿಯುವ ಆತಂಕ ಎದುರಾಗಿದೆ
ಶಿರೂರು ಕ್ಯಾಂಟೀನ್ ಮಾಲೀಕನ ಐದು ವರ್ಷದ ಮಗಳ ಮೃತದೇಹ ಪತ್ತೆಯಾಗಿದೆ. ಆವಂತಿಕ (5) ಮೃತ ಬಾಲಕಿ. ಗಂಗಾವಳಿ ನದಿಯಲ್ಲಿ ತೇಲಿ ಹೋಗಿ ಗೋಕರ್ಣ ಬ್ರಿಡ್ಜ್ ಬಳಿ ಆವಂತಿಕ ಮೃತದೇಹ ಪತ್ತೆಯಾಗಿದೆ. ಒಟ್ಟು ಆರು ಜನ ಮೃತಪಟ್ಟಿರುವ ಮಾಹಿತಿಯಿದೆ. ಸದ್ಯ ಈಗ ಐದು ಜನ ಸಿಕ್ಕಿದ್ದಾರೆ. ಕ್ಯಾಂಟೀನ್ ಮಾಲೀಕನ ಮಗಳು ಆವಂತಿಕಾ ಮೃತದೇಹ ಪತ್ತೆಯಾಗಿದೆ. ಮತ್ತೊಂದು ಕಡೆ ರಸ್ತೆ ಮೇಲಿನ ಗುಡ್ಡ ತೆರವು ಕಾರ್ಯ ಸಹ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಬಾಲಕಿ ಅಂಕಿತಾ ಹಾಗೂ ಗ್ಯಾಸ್ ಟ್ಯಾಂಕರ್ ಚಾಲಕ ಮುರುಗನ್, ಚಿನ್ನ ಎಂಬುವವರ ಶವ ಅಂಕೋಲಾದ ಮಂಜಗುಣಿ ಬಳಿಯ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ಘಟನೆ ನಡೆದ ದಿನ ಒಂದು ಮೃತದೇಹ ಹಾಗೂ ನಿನ್ನೆ ಮೂರು ಮೃತದೇಹಗಳು ಪತ್ತೆಯಾಗಿದ್ದವು.