For the best experience, open
https://m.samyuktakarnataka.in
on your mobile browser.

ಶಿರೂರು ಗುಡ್ಡ ಕುಸಿತ ಪ್ರಕರಣ: 8 ದಿನಗಳ ಬಳಿಕ ಪತ್ತೆಯಾದ ಸಣ್ಣಿ ಗೌಡ ಮೃತದೇಹ

09:12 AM Jul 23, 2024 IST | Samyukta Karnataka
ಶಿರೂರು ಗುಡ್ಡ ಕುಸಿತ ಪ್ರಕರಣ  8 ದಿನಗಳ ಬಳಿಕ ಪತ್ತೆಯಾದ ಸಣ್ಣಿ ಗೌಡ ಮೃತದೇಹ

ಕಾರವಾರ: ಅಂಕೋಲಾ ಶಿರೂರು ಗುಡ್ಡಕುಸಿತದಿಂದ ನಾಪತ್ತೆಯಾದವರ ಪೈಕಿ ಉಳುವರೆಯ ಸಣ್ಣಿ ಹನುಮಂತ ಗೌಡ ಶವ 8 ದಿನಗಳ ಬಳಿಕ ಪತ್ತೆಯಾಗಿದೆ.
ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ನಾಪತ್ತೆಯಾಗಿದ್ದ ಸಣ್ಣಿ ಹನ್ಮಂತ ಗೌಡ (57) ಮೃತದೇವ ಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಹಠಾತ್ ಸೃಷ್ಟಿಯಾದ ನೆರೆಯಲ್ಲಿ ಕಾಣೆಯಾಗಿದ್ದ ಸಣ್ಣಿ ಗೌಡ ಸೇರಿದಂತೆ ಮೂವರಿಗಾಗಿ NDRF-SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ನಡೆಸಲಾಗುತ್ತಿತ್ತು. ಸದ್ಯ ನಾಪತ್ತೆಯಾದ 11 ಮಂದಿ ಪೈಕಿ 8 ಮೃತದೇಹಗಳು ಪತ್ತೆಯಾಗಿದ್ದು ಇನ್ನು ಮೂವರಿಗಾಗಿ ಮತ್ತು ಬೆಂಜ್ ಲಾರಿಗಾಗಿ ಸೇನಾಪಡೆಗಳು, ಎನ್ ಡಿ ಆರ್ ಎಫ್, ಎಸ್ ಡಿಆರ್ ಎಫ್ ಹಾಗೂ ಪೊಲೀಸರು, ಅಗ್ನಿಶಾಮಕ ಸಿಬ್ಬಂಗಳಿಂದ ಹುಡುಕಾಟ ಮುಂದುವರಿಸಲಾಗಿದೆ.